ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಚೀನಾ ಕ್ಯಾತೆ: ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಆಗ್ರಹ (Kashmir | Pakistan | India | Dialouge)
Feedback Print Bookmark and Share
 
ಕಾಶ್ಮೀರ ವಿವಾದದ ಪ್ರಶ್ನೆಯು ಇತಿಹಾಸದಲ್ಲಿ ಇತ್ಯರ್ಥವಾಗದೇ ಬಿಟ್ಟುಹೋಗಿರುವ ವಿಷಯವೆಂದು ಚೀನಾ ಬಣ್ಣಿಸುವ ಮ‌ೂಲಕ, ಭಾರತ ಮತ್ತು ಪಾಕಿಸ್ತಾನವು ಮಾತುಕತೆಯ ಮ‌ೂಲಕ ಕಾಶ್ಮೀರ ವಿಷಯವನ್ನು ಸೂಕ್ತವಾಗಿ ಬಗೆಹರಿಸುವ ಅಗತ್ಯದ ಬಗ್ಗೆ ಗಮನಸೆಳೆದಿದೆ.

ಭಾರತ ಮತ್ತು ಪಾಕಿಸ್ತಾನ ಮಾತುಕತೆ ಮತ್ತು ಸಮಾಲೋಚನೆ ಮ‌ೂಲಕ ಇತಿಹಾಸದಲ್ಲಿ ಹಿಂದೆಉಳಿದ ಕಾಶ್ಮೀರ ವಿವಾದವನ್ನು ಸೂಕ್ತವಾಗಿ ಬಗೆಹರಿಸಬೇಕೆಂದು ವಿದೇಶಾಂಗ ಸಚಿವಾಲಯದ ವಕ್ತಾರ ಮಾ ಝಾವೋಕ್ಸು ತಿಳಿಸಿದರು.ಜಮ್ಮುಕಾಶ್ಮೀರದಿಂದ ಪಾಸ್‌ಪೋರ್ಟ್ ಹೊಂದಿರುವ ಜನತೆಗೆ ಪ್ರತ್ಯೇಕ ವೀಸಾ ನೀಡಲು ಚೀನಾ ನಿರ್ಧರಿಸಿದ ಬಳಿಕ ಕಾಶ್ಮೀರ ವಿಷಯದ ಬಗ್ಗೆ ಚೀನಾ ನಿಲುವನ್ನು ಕುರಿತು ಪತ್ರಿಕಾಗೋಷ್ಠಿಯೊಂದರಲ್ಲಿ ಪ್ರಶ್ನಿಸಿದಾಗ ಅವರು ಮೇಲಿನಂತೆ ಉತ್ತರಿಸಿದ್ದಾರೆ.

ಚೀನಾದ ವಿದೇಶಾಂಗ ಸಚಿವ ಯಾಂಗ್ ಚೈಚಿ ಅವರು ಅ.27ರಂದು ನಡೆಯುವ ಚೀನಾ, ರಷ್ಯಾ ಮತ್ತು ಭಾರತದ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಲಿದ್ದಾರೆಂದು ಮಾ ಪ್ರಕಟಿಸಿದ್ದಾರೆ. ಭೇಟಿ ಸಂದರ್ಭದಲ್ಲಿ ಯಾಂಗ್ ಭಾರತದ ಸಹವರ್ತಿ ಎಸ್.ಎಂ.ಕೃಷ್ಣ ಜತೆ ಪ್ರತ್ಯೇಕ ಮಾತುಕತೆ ನಡೆಸಲಿದ್ದಾರೆ.

ಇಬ್ಬರು ವಿದೇಶಾಂಗ ಸಚಿವರು, ದ್ವಿಪಕ್ಷೀಯ ಬಾಂಧವ್ಯ, ಪ್ರಾದೇಶಿಕ ಮತ್ತು ಸಮಾನ ಹಿತಾಸಕ್ತಿಯ ಅಂತಾರಾಷ್ಟ್ರೀಯ ವಿಷಯಗಳ ವಿಚಾರವಿನಿಮಯ ನಡೆಸಲಿದ್ದಾರೆಂದು ಕ್ಸಿನುವಾ ಸುದ್ದಿ ಸಂಸ್ಥೆ ತಿಳಿಸಿದೆ. ಅರುಣಾಚಲ ಪ್ರದೇಶದ ಬಗ್ಗೆ ಭಾರತ-ಚೀನಾ ಬಾಂಧವ್ಯ ಕುರಿತಂತೆ ಅಹಿತಕಾರಿ ಬೆಳವಣಿಗೆಗಳು ಉಂಟಾದ ಹಿನ್ನೆಲೆಯಲ್ಲಿ ತ್ರಿಪಕ್ಷೀಯ ಸಭೆ ನಡೆಯುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ