ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಗಡಿವಿವಾದ ಶಮನಕ್ಕೆ ಪ್ರಧಾನಿ ಸಿಂಗ್, ಜಿಯಾಬೊ ಭೇಟಿ (Manmohan | Wen Jiabao | New Delhi | Border dispute)
Feedback Print Bookmark and Share
 
ದಶಕಗಳ ಕಾಲದ ಗಡಿವಿವಾದದ ಸುತ್ತ ಕೇಂದ್ರೀಕೃತವಾದ ಏಷ್ಯಾದ ಉಭಯ ದೈತ್ಯರಾಷ್ಟ್ರಗಳ ನಡುವೆ ವಾಕ್ಸಮರದ ಉಲ್ಬಣವನ್ನು ಶಮನಗೊಳಿಸುವ ಆಶಯದೊಂದಿಗೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಚೀನಾದ ಸಹವರ್ತಿ ವೆನ್ ಜಿಯಾಬೊ ಅವರನ್ನು ಶನಿವಾರ ಭೇಟಿಯಾಗುವ ನಿರೀಕ್ಷಿಸಿದೆ.

ಥಾಯ್ಲಿಂಡ್‌ನಲ್ಲಿ ಪ್ರಾದೇಶಿಕ ಶೃಂಗಸಭೆ ನೇಪಥ್ಯದಲ್ಲಿ ನಡೆಯುವ ಭೇಟಿಯು,ಉಭಯ ರಾಷ್ಟ್ರಗಳ ನಡುವೆ ಉಲ್ಬಣಿಸಿದ ರಾಜತಾಂತ್ರಿಕ ಬಿಕ್ಕಟ್ಟಿನ ಬಳಿಕ ಉದ್ಭವಿಸಿದ ಉದ್ವಿಗ್ನತೆ ಮತ್ತು ಭಯದ ನಂತರದ ಪ್ರಥಮ ಉನ್ನತ ಮಟ್ಟದ ಭೇಟಿಯಾಗಿದೆ.ಚೀನಾದ ಗಡಿ ಅತಿರೇಖಗಳ ಬಗ್ಗೆ ಭಾರತೀಯ ಮಾಧ್ಯಮಗಳಲ್ಲಿ ಉಲ್ಲೇಖ, ಚೀನಾ ತನಗೆ ಸೇರಿದ್ದೆಂದು ವಾದಿಸುತ್ತಿರುವ ಅರುಣಾಚಲಕ್ಕೆ ಮುಂದಿನ ತಿಂಗಳು ಟಿಬೆಟ್ ಧರ್ಮಗುರು ದಲೈಲಾಮಾ ಭೇಟಿಗೆ ಚೀನಾ ಆಕ್ಷೇಪ ಮುಂತಾದವುಗಳಿಂದ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಸ್ಫೋಟಿಸಿದೆ.

ಪ್ರಧಾನಿ ಮನಮೋಹನ್ ಸಿಂಗ್ ಈ ತಿಂಗಳು ಅರುಣಾಚಲಕ್ಕೆ ಭೇಟಿ ನೀಡಿದ್ದಕ್ಕೆ ಕೂಡ ಚೀನಾ ಬಲವಾದ ಆಕ್ಷೇಪ ವ್ಯಕ್ತಪಡಿಸಿದೆ. ಚೀನಾ-ಭಾರತ ವೈರತ್ವವನ್ನು ಕೆಲವರು ಏಷ್ಯಾವನ್ನು ಯಾರು ಆಳುತ್ತಾರೆಂಬ ರೀತಿಯಲ್ಲಿ ವ್ಯಾಖ್ಯಾನಿಸಿದರೂ, ಗಡಿ ವಿವಾದ ಉಲ್ಬಣಕ್ಕೆ ದಲೈಲಾಮಾ ನಿಯಂತ್ರಣದಲ್ಲಿಲ್ಲದ ಅಂಕೆಗೆ ಸಿಗದ ಯುವ ಟಿಬೆಟನ್ನರ ಪೀಳಿಗೆ ಕುರಿತ ಬೀಜಿಂಗ್ ಕಳವಳವನ್ನು ಕೂಡ ಬಿಂಬಿಸಿದೆ.

ದಲೈಲಾಮಾ ಅವರಿಗೆ ಆಶ್ರಯ ನೀಡುವ ಮ‌ೂಲಕ ಟಿಬೆಟ್ ಸಂಸ್ಕೃತಿ ಮತ್ತು ರಾಜಕೀಯ ಗುರುತಿಸುವಿಕೆಯನ್ನು ಭಾರತ ಜೀವಂತವಾಗಿಟ್ಟಿದೆಯೆಂದು ಚೀನಾ ಭಾರತವನ್ನು ಹೊಣೆಯನ್ನಾಗಿ ಮಾಡಿದ್ದು, 1962ರ ಯುದ್ಧಕ್ಕೆ ಅದೇ ವಿವಾದದ ಕೇಂದ್ರಬಿಂದುವಾಗಿತ್ತು. ಈಗಲೂ ಕೂಡ ಇದು ವಿವಾದದ ಮ‌ೂಲ ಕಾರಣವೆಂದು ವ್ಯೂಹಾತ್ಮಕ ವಿಶ್ಲೇಷಕ ಪ್ರೇಮ್ ಕುಮಾರ್ ಝಾ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮನಮೋಹನ್, ಜಿಯಾಬೊ, ಚೀನಾ, ದಲೈಲಾಮಾ