ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅರೆಕೌಶಲ್ಯದ ಪಡೆ ಕಡಿತ, 'ಬ್ರೈನಿ' ಪಡೆ ನೇಮಕ (China | Army | Graduates | Armed forces)
Feedback Print Bookmark and Share
 
ಪದವೀಧರರು ಎದುರಿಸುತ್ತಿರುವ ನಿರುದ್ಯೋಗದ ಬಿಕ್ಕಟ್ಟು ನಿವಾರಣೆಗೆ ಕಂಕಣಬದ್ಧವಾದ ಚೀನಾದ ಸೇನೆ ಚೀನಾದ ವಿವಿ ಮತ್ತು ಕಾಲೇಜುಗಳಿಂದ ಹೊರಬೀಳುವ 130,000 ಪದವೀಧರರನ್ನು ಈ ಚಳಿಗಾಲದಲ್ಲಿ ನೇಮಿಸಲು ನಿರ್ಧರಿಸಿದೆ.

ಕಡಿಮೆ ಕೌಶಲ್ಯದ ಕಾಲ್ದಳದ 23 ಲಕ್ಷ ಸೈನಿಕರುಳ್ಳ ಪೀಪಲ್ಸ್ ಲಿಬರೇಷನ್ ಆರ್ಮಿಯನ್ನು ಏಳುಲಕ್ಷಕ್ಕೆ ಕಡಿತಮಾಡಿ, ಉತ್ತಮ ವಿದ್ಯಾಭ್ಯಾಸದ ಸೈನಿಕರನ್ನು ತಾಂತ್ರಿಕವಾಗಿ ಅತ್ಯಾಧುನಿಕವಾದ ಪಡೆಗೆ ನೇಮಿಸುವ ಯೋಜನೆಯನ್ನು ಚೀನಾದ ಮ‌ೂಲಗಳು ಬಹಿರಂಗ ಮಾಡಿದೆ.

ಮಿಲಿಟರಿ ಸೇವೆಗೆ ಸಹಿ ಹಾಕಿದ ಪದವೀಧರರಿಗೆ ಕಾಲೇಜು ಟ್ಯೂಷನ್ ಶುಲ್ಕ ಅಥವಾ ವಿದ್ಯಾರ್ಥಿ ಸಾಲಗಳು ಸೇರಿದಂತೆ 24,000 ಯಾನ್ ರಿಬೇಟ್ ನೀಡುವುದಾಗಿ ಶಿಕ್ಷಣ ಸಚಿವಾಲಯದ ಹೇಳಿಕೆ ಉಲ್ಲೇಖಿಸಿ ಕ್ಸಿನುವಾ ನ್ಯೂಸ್ ವರದಿ ಮಾಡಿದೆ.
ಸಂಬಂಧಿತ ಮಾಹಿತಿ ಹುಡುಕಿ