ಆಸ್ಟ್ರೇಲಿಯದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಜನಾಂಗೀಯ ದಾಳಿಗಳು ನಡೆಯುತ್ತಿರುವ ನಡುವೆ, ಈಗ ಬ್ರಿಟನ್‌ನಲ್ಲಿ ಕೂಡ ಭಾರತೀಯ ಅಂಗಡಿ ಮಾಲೀಕರು ಜನಾಂಗೀಯ ಹಿಂಸೆಗೆ ಗುರಿಯಾಗಿದ್ದಾರೆ.
ಬ್ರಿಟನ್ನಿನ ಬ್ರಿಸ್ಟಲ್‌ನಲ್ಲಿ ಅವಳಿಗಳಾದ ಜಸ್ಟಿನ್ ಮ್ತು ಲೂಕ್ ಲವ್‌ಡೇಲ್ ಹಾಗೂ ನಿಕೋಲಾಸ್ ಎಂಬ 17 ಪ್ರಾಯದ ಯುವಕರು ಎರಡು ಭಾರತೀಯರ ಅಂಗಡಿಗಳಿಗೆ ನುಗ್ಗಿ ಜನಾಂಗೀಯ ನಿಂದನೆ ಮಾಡಿದ್ದಲ್ಲದೇ ಕಾಲಿನಿಂದ ಒದೆದರು.
ಎರಡು ಅಂಗಡಿಗಳಲ್ಲಿ ಕಮಂಗಿಗಳ ಹಿಂಸಾಚಾರವನ್ನು ಸಿಸಿಟಿವಿ ಕ್ಯಾಮೆರಾಗಳು ಸೆರೆಹಿಡಿದಿದ್ದು, ಈ ಚಿತ್ರಗಳನ್ನು ಬ್ರಿಸ್ಟಲ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ತೋರಿಸಲಾಗಿದ್ದು, ಎಲ್ಲ ಮೂವರು ಎರಡೂ ಅಂಗಡಿಗಳಲ್ಲಿ ಜನಾಂಗೀಯ ಥಳಿತದ ಆರೋಪದ ಮೇಲೆ ತಪ್ಪಿತಸ್ಥರೆನಿಸಿದ್ದಾರೆ.