ಇಸ್ಲಾಮಾಬಾದ್, ಶನಿವಾರ, 24 ಅಕ್ಟೋಬರ್ 2009( 19:20 IST )
ಪಾಕಿಸ್ತಾನದ ಬಜೌರ್ ಬುಡಕಟ್ಟು ಪ್ರದೇಶದ ಮೇಲೆ ಅಮೆರಿಕದ ಡ್ರೋನ್ ದಾಳಿಯಲ್ಲಿ ತಾಲಿಬಾನ್ ಉನ್ನತ ಅಧಿನಾಯಕ ಮೌಲ್ವಿ ಫಕೀರ್ ಅಹ್ಮದ್‌ನ ಬಂಧು ಸೇರಿದಂತೆ ಕನಿಷ್ಠ 18 ಉಗ್ರಗಾಮಿಗಳು ಹತರಾಗಿದ್ದಾರೆ.
ಅನೇಕ ಮಂದಿ ಉಗ್ರಗಾಮಿಗಳು ಉಪಸ್ಥಿತರಿದ್ದ ಬಜೌರ್ ಏಜನ್ಸಿಯ ಡಮಾಡೋಲಾ ಕಾಂಪೌಂಡ್ ಮೇಲೆ ಡ್ರೋನ್ ವಿಮಾನ ಗುರಿಯಿರಿಸಿತೆಂದು ಟಿವಿ ಸುದ್ದಿಚಾನೆಲ್‌ಗಳು ವರದಿ ಮಾಡಿವೆ. ಡ್ರೋನ್ ದಾಳಿಯಲ್ಲಿ ಫಕೀರ್ ಅಹ್ಮದ್‌ನ ಅಳಿಯ ಮತ್ತು ಸೋದರಳಿಯ ಜತೆಗೆ ಮೂವರು ವಿದೇಶಿ ಉಗ್ರರು ಹತರಾಗಿದ್ದಾರೆ.
ಕಳೆದ ಕೆಲವು ವಾರಗಳಿಂದ ಬುಡಕಟ್ಟು ವಲಯದಲ್ಲಿ ತಾಲಿಬಾನ್ ಸರಣಿ ದಾಳಿಗಳನ್ನು ನಡೆಸಿದ್ದರಿಂದ ಅಮೆರಿಕ ಪುನಃ ಡ್ರೋನ್ ದಾಳಿ ಆರಂಭಿಸಿತೆಂದು ವರದಿಯಾಗಿದೆ. ದಕ್ಷಿಣ ವಜಿರಿಸ್ತಾನದಲ್ಲಿ ತಾಲಿಬಾನ್ ವಿರುದ್ಧ ಸೇನೆ ಕಾರ್ಯಾಚರಣೆ ಆರಂಭಿಸಿದ ಬಳಿಕ ಅಮೆರಿಕವು ಡ್ರೋನ್ ದಾಳಿಗಳನ್ನು ಕಡಿತ ಮಾಡಿತ್ತು.