ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇರಾಕ್: ಅವಳಿ ಬಾಂಬ್ ಸ್ಫೋಟಕ್ಕೆ 147 ಬಲಿ (Baghdad | car bomb | US force | Iraq's)
Feedback Print Bookmark and Share
 
ಹಿಂಸಾಪೀಡಿತ ಇರಾಕ್‌ನ ರಾಜಧಾನಿ ಬಾಗ್ದಾದ್‌ನಲ್ಲಿ ಭಾನುವಾರ ಪ್ರಬಲವಾದ ಅವಳಿ ಸ್ಫೋಟ ಸಂಭವಿಸಿದ್ದು, ಕನಿಷ್ಠ 147ಮಂದಿ ಸಾವನ್ನಪ್ಪಿದ್ದಾರೆ.

ಈ ಭೀಕರ ದುರಂತದಲ್ಲಿ 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸರ್ಕಾರಿ ಕಟ್ಟಡಗಳನ್ನೇ ಗುರಿಯಾಗಿಸಿ ಎರಡು ಕಾರ್ ಬಾಂಬ್‌ಗಳನ್ನು ಉಗ್ರರು ಸ್ಫೋಟಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಗ್ದಾದ್‌ನ ಹೃದಯ ಭಾಗಗಳಲ್ಲಿರುವ ಪ್ರಾಂತೀಯ ಆಡಳಿತ ಮುಖ್ಯ ಕಚೇರಿ ಮತ್ತು ಕಾನೂನು ಸಚಿವಾಲಯದ ಸಮೀಪದಲ್ಲೇ ಈ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಸ್ಥಳದಲ್ಲಿ ದಟ್ಟವಾದ ಹೊಗೆ ಆಗಸದೆತ್ತರಕ್ಕೆ ಏರಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇರಾಕ್‌ನಲ್ಲಿ ಈ ವರ್ಷ ಸಂಭವಿಸಿದ ಅತಿ ಭೀಕರ ದಾಳಿ ಇದಾಗಿದೆ. ಆದರೆ ಈ ದಾಳಿಗೆ ಯಾವುದೇ ಉಗ್ರಗಾಮಿ ಸಂಘಟನೆ ಹೊಣೆ ಹೊತ್ತುಕೊಂಡಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ