ಪ್ರೇಮಸೌಧ ತಾಜ್‌ಮಹಲ್ ಸ್ವಂತದ್ದಾಗಿಸಿಕೊಳ್ಳಬೇಕೆಂಬ ಆಸೆ ಇದೆಯೇ?ಹಾಗಿದ್ದರೆ ಕಾಲ ಕೂಡಿ ಬಂದಿದೆ. ತಾಜ್ ಮಹಲ್ ಈಗ ಮಾರಾಟಕ್ಕಿದೆ!.ಆದರೆ ಇದು ಷಹಜಹಾನ್ ಕಟ್ಟಿಸಿದ ಭಾರತದ ತಾಜ್ ಮಹಲ್ ಅಲ್ಲ.
ಇದು ಅಮರಿಕದ ಇಲಿನೋಯ್ಸ್ ಬುರ್‌ರಿಜ್‌ನಲ್ಲಿ ನಿರ್ಮಿಸಲಾಗಿರುವ ವೈಭವೋಪೇತ ಸೌಧವಿದು. ನ.4ರಂದು 'ವಿಲ್ಲಾ ತಾಜ್' ಹೆಸರಿನ ಈ ಸೌಧದ ಹರಾಜು ಪ್ರಕ್ರಿಯೆ ನಡೆಯಲಿದ್ದು ಪ್ರಾರಂಭಿಕ ದರ 29ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ.
30ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಭಾರತೀಯ ಹಾಗೂ ಸ್ಪಾನಿಷ್, ಈಜಿಪ್ಷಿಯನ್, ಮೊರಕ್ಕೊ ಶೈಲಿಯಲ್ಲಿ ಈ ಆಧುನಿಕ ತಾಜ್ ಮಹಲ್ ನಿರ್ಮಿಸಲಾಗಿದೆ. ಇದರ ನಿರ್ಮಾಣಕ್ಕೆ 5ವರ್ಷ ತಗುಲಿದ್ದು 84ಕೋಟಿ ರೂಪಾಯಿ ವಚ್ಚವಾಗಿದೆ. ಇದರಲ್ಲಿ ವಾಸಿಸುತ್ತಿದ್ದ ಮಾಲಿಕ, ದಂತವೈದ್ಯ ಹುಸಮ್ ಅಲ್ದೈರಿಯ ಪತ್ನಿ ರಾವಾ ಅಟ್ಟಾ ಅಲ್ದೈರಿಗೆ ಇಲ್ಲಿನ ಚಳಿ ಸಹಿಸಲಾಗುತ್ತಿಲ್ಲ ಎಂಬ ಕಾರಣಕ್ಕೆ ಈ ಸೌಧವನ್ನು ಮಾರಾಟ ಮಾಡಲು ಹೊರಟಿದ್ದಾರಂತೆ. ಅವರು ತಮ್ಮ ವಾಸವನ್ನು ಫ್ಲೋರಿಡಾಕ್ಕೆ ಸ್ಥಳಾಂತರಿಸಿದ್ದಾರೆ.