ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತಾಲಿಬಾನ್‌‌ಗೆ ಭಾರತವೇ ಹಣ ಕೊಡ್ತಿದೆ: ಪಾಕ್ ಹೊಸ ರಾಗ! (Taliban | Rehman Malik | India | Pak | ISI)
Feedback Print Bookmark and Share
 
ಅಫ್ಘಾನಿಸ್ತಾನದ ಗಡಿಭಾಗ ಸೇರಿದಂತೆ ಪಾಕಿಸ್ತಾನದಲ್ಲಿ ತಳವೂರಿರುವ ತಾಲಿಬಾನ್ ಉಗ್ರಗಾಮಿಗಳಿಗೆ ಭಾರತ ಆರ್ಥಿಕ ನೆರವು ನೀಡುತ್ತಿರುವುದಾಗಿ ಪಾಕಿಸ್ತಾನ ಮತ್ತೊಮ್ಮೆ ಭಾರತದ ವಿರುದ್ಧ ಗಂಭೀರ ಆರೋಪ ಮಾಡಿದೆ.

ಬಲೂಚಿಸ್ತಾನದಲ್ಲಿ ಭಾರತ ಭಯೋತ್ಪಾದನಾ ಕೃತ್ಯ ಹಾಗೂ ಉಗ್ರಗಾಮಿ ಚಟುವಟಿಕೆಗಳಿಗೆ ಸಹಕಾರ ನೀಡುತ್ತಿರುವುದಾಗಿ ಇತ್ತೀಚೆಗಷ್ಟೇ ಪಾಕಿಸ್ತಾನ ಭಾರತದ ವಿರುದ್ಧ ಆರೋಪ ಹೊರಿಸಿತ್ತು. ಇದು ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು. ಇದೀಗ ಮತ್ತೊಮ್ಮೆ ಪಾಕಿಸ್ತಾನದ ಆಂತರಿಕ ಸಚಿವ ರೆಹಮಾನ್ ಮಲಿಕ್, ತಾಲಿಬಾನಿಗಳಿಗೆ ಭಾರತ ಆರ್ಥಿಕ ನೆರವು ನೀಡುತ್ತಿರುವುದಾಗಿ ಗೂಬೆ ಕೂರಿಸಿದ್ದಾರೆ.

ಪಾಕಿಸ್ತಾನವನ್ನು ಅಸ್ಥಿರಗೊಳಿಸುವ ನಿಟ್ಟಿನಲ್ಲಿ 'ನಿರ್ದಿಷ್ಟವಾದ ಶತ್ರುತ್ವ ಹೊಂದಿರುವ ಏಜೆನ್ಸಿಯೊಂದ'ರ ಮೂಲಕ ಭಾರತ ತಾಲಿಬಾನ್ ಸಂಸ್ಥೆಗೆ ಬೆಂಬಲ ನೀಡುತ್ತಿರುವುದಾಗಿ ಮಲಿಕ್ ಆರೋಪಿಸಿದರು.

ತಾಲಿಬಾನ್ ಉಗ್ರಗಾಮಿ ಸಂಸ್ಥೆಯ ಹಿಂದೆ ಯಾರಿದ್ದಾರೆ ಎಂಬ ಖಾಸಗಿ ಟಿವಿ ಚಾನೆಲ್‌ವೊಂದು ಸಂದರ್ಶನದ ವೇಳೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಲಿಕ್, ಪೂರ್ವಾಗ್ರಹ ಪೀಡಿತ ಉಗ್ರರು ಹಾಗೂ ಏಜೆನ್ಸಿಯೊಂದಕ್ಕೆ ಪಾಕಿಸ್ತಾನ ಭದ್ರವಾಗಿರುವುದು ಬೇಕಾಗಿಲ್ಲ ಎಂದು ಹೇಳಿದರು.

ಅಂದರೆ ನಿಮ್ಮ ಅರ್ಥ ಅದು ಭಾರತದ ಏಜೆನ್ಸಿಯೇ ಎಂದು ಕೇಳಿದ ಮತ್ತೊಂದು ಪ್ರಶ್ನೆಗೆ, ಹೌದು ನಿಜವಾಗ್ಲೂ. ಆ ವಿಷಯವನ್ನು ನಾನು ಚೆನ್ನಾಗಿ ಮನಗಂಡಿದ್ದೇನೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಆ ಬಗ್ಗೆ ನಾನು ಪೂರ್ಣ ಪ್ರಮಾಣದಲ್ಲಿ ವಿವರಣೆ ನೀಡಲು ಸಿದ್ಧ ಎಂಬುದಾಗಿಯೂ ಅವರು ವಿಶ್ವಾಸವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ