2004ರಲ್ಲಿ ನಡೆದ ಪ್ರಧಾನಮಂತ್ರಿ ಶೇಖ್ ಹಸೀನಾ ಮೇಲಿನ ಗ್ರೆನೇಡ್ ದಾಳಿ ಪ್ರಕರಣದಲ್ಲಿ ಬಾಂಗ್ಲಾದೇಶದ ರಾಷ್ಟ್ರೀಯ ಪಕ್ಷ ಕೂಡ ಭಾಗಿಯಾಗಿತ್ತೆಂಬ ವರದಿಯನ್ನು ಮಾಧ್ಯಮವೊಂದು ತಿಳಿಸಿದೆ.
ದಿ ಡೈಲಿ ಸ್ಟಾರ್ ಇನ್‌ವೆಸ್ಟಿಗೇಷನ್ ಪತ್ರಿಕೆ ಈ ವರದಿಯನ್ನು ಬಹಿರಂಗಪಡಿಸಿದ್ದು, ನಿಷೇಧಿತ ಹರ್ಕತುಲ್ಲಾ ಜಿಹಾದ್ ಅನ್ನು ಬಳಸಿಕೊಂಡು ಪಕ್ಷ ಈ ಸಂಚು ರೂಪಿಸಿತ್ತು ಎಂದು ಅದು ತನ್ನ ವರದಿಯಲ್ಲಿ ವಿವರಿಸಿದೆ.
ಕಳೆದ 5ವರ್ಷಗಳಿಂದ ಗುಪ್ತಚರ ಇಲಾಖೆ ಕಲೆ ಹಾಕಿದ ಮಾಹಿತಿಯ ಆಧಾರದ ಮೇಲೆ ಈ ವರದಿಯನ್ನು ಮಾಡಲಾಗಿದೆ ಎಂದು ಪತ್ರಿಕೆ ಸ್ಪಷ್ಟೀಕರಣ ನೀಡಿದೆ.
ಢಾಕಾದಲ್ಲಿ ನಡೆಯುತ್ತಿದ್ದ ಪಕ್ಷದ ರಾಲಿಯ ಸಂದರ್ಭ ಗ್ರೆನೇಡ್ ದಾಳಿ ನಡೆದಿದ್ದು, ಘಟನೆಯಿಂದ ಹಸೀನಾ ಪಾರಾಗಿದ್ದರೂ ಕೂಡ 24ಮಂದಿ ಅಮಾಯಕರು ಪ್ರಾಣ ಕಳೆದುಕೊಂಡು, ಅನೇಕ ಮಂದಿ ಗಾಯಗೊಂಡಿದ್ದರು.