ಕ್ವೆಟ್ಟೋದಲ್ಲಿ ಸೇನಾ ಪೆರೇಡ್ ನಡೆಸುತ್ತಿದ್ದ ವೇಳೆ ಭಾರತೀಯ ನಿರ್ಮಾಣದ ಧ್ರುವ್ ಅಥವಾ ಸುಧಾರಿತ ಹಗುರ ಹೆಲಿಕಾಫ್ಟರ್ ಅಪಘಾತಕ್ಕೀಡಾಗಿದೆ. ಹೆಲಿಕಾಫ್ಟರ್‌ನಲ್ಲಿದ್ದ ಇಬ್ಬರೂ ಪೈಲಟ್‌ಗಳು ಸುರಕ್ಷಿತರಾಗಿದ್ದಾರೆ.
ಈಕ್ವೆಡಾರ್‌ನ ಸೇನಾಪಡೆಗೆ 45 ಮಿಲಿಯ ಡಾಲರ್‌ಗಳಿಗೆ ಎಚ್ಎಎಲ್ ಮಾರಾಟ ಮಾಡಿರುವ ಏಳು ಹೆಲಿಕಾಫ್ಟರ್‌ಗಳಲ್ಲಿ ಈ ಅಪಘಾತಕ್ಕೀಡಾಗಿರುವ ಹೆಲಿಕಾಫ್ಟರ್ ಒಂದಾಗಿದೆ. ಈ ಅಪಘಾತದ ಕಾರಣದಿಂದಾಗಿ ಸರ್ಕಾರವು ಉಳಿದ ಆರು ಹೆಲಿಕಾಫ್ಟರ್‌ಗಳ ಬಳಕೆಯನ್ನು ಸ್ಥಗಿತಗೊಳಿಸಿದೆ. ಇದರಲ್ಲೊಂದನ್ನು ಈಕ್ವೆಡಾರ್‌ನ ಪ್ರಧಾನಿ ರಾಫೆಲ್ ಕೊರ್ರೆಯ ಬಳಸುತ್ತಿದ್ದರು.
ಈಕ್ವೆಡಾರ್‌ನ ಸಶಸ್ತ್ರಪಡೆಯು ತನ್ನ 89ನೆ ವರ್ಷಾಚರಣೆ ನಡೆಸುತ್ತಿದ್ದ ವೇಳೆ ಹೆಲಿಕಾಫ್ಟರ್ ಅಪಘಾತಕ್ಕೀಡಾಗಿದೆ. ಹೆಲಿಕಾಫ್ಟಾರ್ ಪೆರೇಡ್‌ನಲ್ಲಿ ಭಾಗವಹಿಸಿದ್ದ ವೇಳೆ ಅದರ ಹಿಂಬದಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅದು ಸುರುಳಿ ಸುತ್ತುತ್ತಾ ನೆಲದತ್ತ ಧಾವಿಸಿತು ಮತ್ತು ತಕ್ಷಣವೇ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿಯ ಜ್ವಾಲೆಯನ್ನು ನಂದಿಸಿದರು ಎಂಬುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.