ವಾಷಿಂಗ್ಟನ್, ಗುರುವಾರ, 29 ಅಕ್ಟೋಬರ್ 2009( 09:49 IST )
PTI
ಪಾಕಿಸ್ತಾನದಲ್ಲಿನ ಭಯೋತ್ಪಾದಕರ ಹಿಂಸಾಕೃತ್ಯಗಳು ಹಾಗೂ ಆಂತರಿಕ ಕಲಹ ದಕ್ಷಿಣ ಏಷ್ಯಾ ರಾಷ್ಟ್ರಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಆತಂಕ ವ್ಯಕ್ತಪಡಿಸಿದ್ದಾರೆ.
ಮೂರು ದಿನಗಳ ಭೇಟಿಗಾಗಿ ಪಾಕಿಸ್ತಾನಕ್ಕೆ ಬುಧವಾರ ತೆರಳುವ ಮುನ್ನ ಖಾಸಗಿ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದಲ್ಲಿ ನಾವು ಇಂದು ಏನು ನೋಡುತ್ತಿದ್ದೇವೋ ಅದು ಅಲ್ಲಿನ ಹಿಂಸಾಪ್ರವೃತ್ತಿಯ ಅಂತಿಮ ಹಂತ ಎಂದು ತಿಳಿಸಿದರು. ಭಾರತ ಮತ್ತು ಪಾಕಿಸ್ತಾನ ಮತ್ತೆ ಮಾತುಕತೆ ಆರಂಭಿಸುವ ವಿಶ್ವಾಸವನ್ನು ಅಮೆರಿಕ ಹೊಂದಿದೆ.
ಈ ಎರಡು ದೇಶಗಳ ನಡುವೆ ಮಾತುಕತೆ ಮತ್ತೆ ಆರಂಭವಾದರೆ ದಕ್ಷಿಣ ಏಷ್ಯಾದಲ್ಲಿ ಶಾಂತಿ ನೆಲೆಸಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.