ಶ್ರೀಲಂಕಾದ ತಮಿಳು ನಿರಾಶ್ರಿತರ ಶಿಬಿರಗಳಲ್ಲಿ ಅವಿತು ಕೊಂಡಿದ್ದ ಸುಮಾರು 300ರಷ್ಟು ಎಲ್‌ಟಿಟಿಇ ಕಾರ್ಯಕರ್ತರು ಅಲ್ಲಿನ ಭದ್ರತಾ ಪಡೆಯ ಬಂಧನಕ್ಕೀಡಾಗಿದ್ದಾರೆ.
ಶ್ರೀಲಂಕಾ ಸೇನೆಯ ಗುಪ್ತಚರ ದಳ ನೀಡಿದ ಸುಳಿವಿನ ಮೇರೆಗೆ ಕಳೆದ ಒಂದು ತಿಂಗಳಿಂದ ಕಾರ್ಯಾಚರಣೆ ಕೈಗೊಂಡ ಭದ್ರತಾ ಪಡೆಗಳು ಒಟ್ಟು 300 ಎಲ್‌ಟಿಟಿಇ ಕಾರ್ಯಕರ್ತರನ್ನು ಯಶಸ್ವಿಯಾಗಿ ಬಂಧಿಸಿವೆ.
ಎಲ್‌ಟಿಟಿಇ ಮತ್ತು ಲಂಕಾ ಸೇನೆ ನಡುವೆ ನಡೆದ ಅಂತಿಮ ಹಣಾಹಣಿಯಲ್ಲಿ ತಪ್ಪಿಸಿಕೊಂಡಿದ್ದ ಇವರು ನಿರಾಶ್ರಿತರ ಶಿಬಿರಗಳಲ್ಲಿ ತೂರಿಕೊಂಡು ತಲೆಮರೆಸಿಕೊಂಡಿದ್ದರು ಎಂದು ಭದ್ರತಾ ಪಡೆ ತಿಳಿಸಿದೆ.