ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ದುಬೈ: ಚಿತ್ರಹಿಂಸೆ ನೀಡಿ ಮಲ ಮಗಳ ಕೊಲೆ (Dubai | Murder | Court | Police)
Feedback Print Bookmark and Share
 
ರಾಕ್ಷಸಿ ಮನಸ್ಸಿನ ತಾಯಿಯೊಬ್ಬಳು ಎಂಟು ವರ್ಷ ಪ್ರಾಯದ ತನ್ನ ಮಲ ಮಗಳನ್ನು ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ ಘಟನೆ ಇಲ್ಲಿ ವರದಿಯಾಗಿದೆ.

ಈ ಬಗ್ಗೆ ವಿಚಾರಣೆ ನಡೆಸಿರುವ ನ್ಯಾಯಾಲಯ ಇಬ್ಬರು ಹೆಂಡಿರನ್ನು ಮದುವೆಯಾಗಿರುವ, ಈ ಮಗುವಿನ ತಂದೆಗೆ 15ವರ್ಷ ಜೈಲು ಶಿಕ್ಷೆ ವಿಧಿಸಿದೆ. ಆದರೆ ಇನ್ನೂ ಹೆಚ್ಚಿನ ಶಿಕ್ಷೆ ನೀಡುವಂತೆ ಮಗುವಿನ ತಾಯಿ ಬೇಡಿಕೆ ಇಟ್ಟಿದ್ದಾಳೆ.

ತನ್ನ ಮಗಳು ಚಿತ್ರಹಿಂಸೆಗೆ ಒಳಗಾಗುತ್ತಿರುವ ವೇಳೆ ಆರೋಪಿ ದೂರದಲ್ಲಿದ್ದ ಎಂದು ಆತನ ಪರ ವಕೀಲರು ತಿಳಿಸಿದ್ದಾರೆ. ಆದರೆ ಮಗುವಿಗೆ ಚಿತ್ರ ಹಿಂಸೆ ನೀಡುತ್ತಿರುವುದಕ್ಕೆ ಈತನ ಪ್ರೋತ್ಸಾಹ ಇತ್ತು ಎಂದು ತನಿಖೆಯಿಂದ ತಿಳಿದು ಬಂದಿದೆ.

ಮಹಿಳೆಯು ಮಲ ಮಗುವಿನ ಗುಪ್ತಾಂಗದೊಳಗೆ ಕಟ್ಟಿಗೆಯನ್ನು ತೂರಿಸಿದ್ದಳು. ಅಷ್ಟೇ ಅಲ್ಲದೆ ದೇಹ ಪೂರ್ತಿ ಗಾಯಗಳಾಗುವಂತೆ ಹಿಂಸೆ ನೀಡಿದ್ದಳು. ನಂತರ ವಿಷಯ ಮರೆ ಮಾಚಲು ಮಗುವನ್ನು ಆಸ್ಪತ್ರೆಗೆ ಸಾಗಿಸಿ, ಮಗು ಮಹಡಿಯಿಂದ ಕೆಳಗೆ ಬಿದ್ದಿದ್ದಕ್ಕೆಹೀಗಾಗಿದೆ ಎಂದು ಸುಳ್ಳು ಹೇಳಿರುವುದಾಗಿ ಪೊಲೀಸರು ವಿವರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದುಬೈ, ಕೊಲೆ, ಕೋರ್ಟ್, ಪೊಲೀಸ್