ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತ-ಪಾಕ್ ಉತ್ತಮ ಸಂಬಂಧ ಬೆಳೆಸಿಕೊಳ್ಳಬೇಕು: ಹಿಲರಿ (India | Pakistan | Manmohan singh | Sonia gandhi)
Feedback Print Bookmark and Share
 
ಪಾಕಿಸ್ತಾನ ಮತ್ತು ಭಾರತ ನಡುವಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸುವ ಮೂಲಕ ಹೆಚ್ಚಿನ ವಿಶ್ವಾಸ ಹಾಗೂ ಭರವಸೆಗಳನ್ನು ದೃಢಗೊಳಿಸಲು ಅಮೆರಿಕ ಆಗ್ರಹಿಸುತ್ತಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಹೇಳಿದ್ದಾರೆ.

ಪಾಕಿಸ್ತಾನಕ್ಕೆ ಪ್ರಥಮ ಬಾರಿಗೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಈ ಎರಡು ದೇಶಗಳು ಒಂದಾಗಿ ಮನಸ್ಸು ಮಾಡಿದರೆ ಯಾವುದೇ ಸಮಸ್ಯೆಯು ಸುಲಭವಾಗಿ ಬಗೆಹರಿಯಬಲ್ಲದು ಎಂದು ಒಬಾಮ ಸರ್ಕಾರ ನಂಬಿರುವುದಾಗಿ ತಿಳಿಸಿದರು.

ಈಗಾಗಲೇ ಉಭಯ ರಾಷ್ಟ್ರಗಳು ಪರಸ್ಪರ ಹೆಚ್ಚಿನ ವಿಶ್ವಾಸವನ್ನು ಗಳಿಸಿಕೊಳ್ಳುವ ಮೂಲಕ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸುವ ಪ್ರಯತ್ನ ಕೈಗೊಂಡಿವೆ ಎಂದರು.

ಎರಡೂ ರಾಷ್ಟ್ರಗಳ ನಡುವೆ ಹೆಚ್ಚಿನ ಸೌಹಾರ್ದತೆಯನ್ನು ಹೊಂದುವ ಸಲುವಾಗಿ ಮಹತ್ತರದ ಕೆಲಸಗಳನ್ನು ಕೈಗೊಂಡಿರುವ ಬಗ್ಗೆ ಸಂತೋಷವಿದೆ. ಲಾಹೋರ್-ದೆಹಲಿ ಬಸ್ ಸಂಪರ್ಕ ಸೇವೆಯನ್ನು ಉಲ್ಲೇಖಿಸಿದ ಹಿಲರಿ ಎರಡೂ ದೇಶಗಳು ಉತ್ತಮ ಸಂಬಂಧವನ್ನು ಬೆಳೆಸುವಂತೆ ಒತ್ತಾಯಿಸಿದರು.
ಸಂಬಂಧಿತ ಮಾಹಿತಿ ಹುಡುಕಿ