ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ರಹಸ್ಯ ಮಾರಾಟಕ್ಕೆ ಯತ್ನ: ಅಮೆರಿಕದ ವಿಜ್ಞಾನಿ ಸೆರೆ (Chandrayaan | US scientist | Washington | secrets | Israel)
Feedback Print Bookmark and Share
 
ಚಂದ್ರನಲ್ಲಿ ನೀರಿನ ಅಂಶ ಇದೆಯೇ ಎಂದು ಕಂಡುಹಿಡಿಯಲು ಭಾರತದ 'ಚಂದ್ರಯಾನ' ಮಿಷನ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಮೆರಿಕದ ವಿಜ್ಞಾನಿಯೊಬ್ಬರು ರಹಸ್ಯ ಮಾಹಿತಿಯನ್ನು ಇಸ್ರೇಲ್‌ಗೆ ಮಾರಾಟ ಮಾಡಲು ಯತ್ನಿಸಿರುವ ಆರೋಪದ ಮೇಲೆ ಬಂಧಿತರಾಗಿರುವುದಾಗಿ ಎಫ್‌ಬಿಐ ಅಧಿಕಾರಿಗಳು ತಿಳಿಸಿದ್ದಾರೆ.

52ರ ಹರೆಯದ ಸ್ಟೆವರ್ಟ್ ಡಿ ನೋಜೆಟ್ಟೆ ನಾಸಾದ ವಿಜ್ಞಾನಿಯಾಗಿದ್ದು, ಇವರು ಸುಮಾರು 2ಮಿಲಿಯನ್ ಅಮೆರಿಕನ್ ಡಾಲರ್‌ಗೆ ಅಮೆರಿಕದ ರಹಸ್ಯಗಳನ್ನು ಇಸ್ರೇಲ್‌ಗೆ ಮಾರಾಟ ಮಾಡಲು ಯತ್ನಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಮೇರಿಲ್ಯಾಂಡ್ ನಿವಾಸಿಯಾಗಿರುವ ಸ್ಟೆವರ್ಟ್ ಇದೀಗ ಎಫ್‌ಬಿಐ ವಶದಲ್ಲಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಕಳೆದ 16ವರ್ಷಗಳಲ್ಲಿ ಫೆಡರಲ್ ಸರ್ಕಾರದಲ್ಲಿ ಸ್ಟೆವರ್ಟ್ ಹಲವು ಸೂಕ್ಷ್ಮ ಅಧಿಕಾರವನ್ನು ಹೊಂದಿದ್ದರು. ಇದರಲ್ಲಿ ಶ್ವೇತಭವನ, ನಾಸಾ, ಇಂಧನ ಇಲಾಖೆ, ರಾಡಾರ್ ಎಕ್ಸ್‌ಪರಿಮೆಂಟ್ ಸೇರಿದಂತೆ ಹಲವು ಮಹತ್ವದ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ