ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬಾಗ್ದಾದ್ ಅವಳಿ ಸ್ಫೋಟ: 61ಭದ್ರತಾ ಯೋಧರ ಸೆರೆ (Baghdad blast | Iraq | Al Qaeda | Salhiya)
Feedback Print Bookmark and Share
 
ಭಾನುವಾರ ನಗರದಲ್ಲಿ ಸಂಭವಿಸಿದ ಅವಳಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 11ಅಧಿಕಾರಿಗಳು ಸೇರಿದಂತೆ 60ಮಂದಿ ಭದ್ರತಾ ಪಡೆಯ ಯೋಧರನ್ನು ಬಂಧಿಸಿರುವುದಾಗಿ ಮಿಲಿಟರಿ ವಕ್ತಾರ ಜನರಲ್ ಕಾಸಿಮ್ ಅಟ್ಟಾ ಗುರುವಾರ ತಿಳಿಸಿದ್ದಾರೆ.

ಭಾನುವಾರ ಸಚಿವಾಲಯ ಹಾಗೂ ಸರ್ಕಾರಿ ಕಟ್ಟಡಗಳನ್ನು ಗುರಿಯಾಗಿರಿಸಿಕೊಂಡು ಉಗ್ರಗಾಮಿಗಳು ನಡೆಸಿದ ಎರಡು ಆತ್ಮಹತ್ಯಾ ಕಾರ್ ಬಾಂಬ್ ಸ್ಫೋಟ ದಿಂದ ಸುಮಾರು 153ಮಂದಿ ಸಾವನ್ನಪ್ಪಿದ್ದು, ಹಲವು ಜನರು ಗಾಯಗೊಂಡಿದ್ದರು. ಆ ನಿಟ್ಟಿನಲ್ಲಿ ಘಟನೆಗೆ ಸಂಬಂಧಿಸಿದಂತೆ ಸಾಲ್‌ಹಿಯಾ ಸೆಕ್ಷನ್‌ನಲ್ಲಿ ನಿಯೋಜಿಸಲಾಗಿದ್ದ ಕೆಲವು ಭದ್ರತಾಪಡೆಯ ಯೋಧರನ್ನು ಸೆರೆ ಹಿಡಿಯಲಾಗಿದೆ ಎಂದು ವಿವರಿಸಿದ್ದಾರೆ.

ಅವಳಿ ಸ್ಫೋಟದ ಕುರಿತು ಆಯೋಗ ತನಿಖೆ ನಡೆಸುತ್ತಿದ್ದು, ಘಟನೆ ಕುರಿತಂತೆ ವಿವಿಧ ಹುದ್ದೆಯ 11 ಅಧಿಕಾರಿಗಳು ಹಾಗೂ 50ಮಂದಿ ಭದ್ರತಾ ಪಡೆಯ ಯೋಧರನ್ನು ಬಂಧಿಸಲಾಗಿದೆ ಎಂದರು. ಸಾಲ್‌ಹಿಯಾದಲ್ಲಿ ನಿಯೋಜಿಸಲಾಗಿದ್ದ ಈ ಅಧಿಕಾರಿಗಳು ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸುವಲ್ಲಿ ವಿಫಲರಾಗಿರುವ ಹಿನ್ನೆಲೆಯಲ್ಲಿ ಅವರನ್ನು ತನಿಖೆಗೆ ಒಳಪಡಿಸಲಾಗಿದೆ ಎಂದು ಹೇಳಿದರು.ಸ್ಫೋಟದ ಹೊಣೆಯನ್ನು ಅಲ್ ಖಾಯಿದಾ ಸಂಘಟನೆ ಹೊತ್ತುಕೊಂಡಿರುವುದಾಗಿ ಆರೋಗ್ಯ ಸಚಿವಾಲಯ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ