ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನೈಪಾಲ್‌‌ರನ್ನು ಕೊಂದ ಅಮೆರಿಕದ ಎಫ್‌‌ಬಿಐ! (Naipal | America | FBI | Police | Nobal)
Feedback Print Bookmark and Share
 
ಭಾರತೀಯ ಮೂಲದ ಖ್ಯಾತ ಕಾದಂಬರಿಕಾರ, ನೊಬೆಲ್ ಪ್ರಶಸ್ತಿ ಪುರಸ್ಕೃತ ವಿ.ಎಸ್.ನೈಪಾಲ್ ಅವರನ್ನು ಅಮೆರಿಕದ ತನಿಖಾದಳ ಎಫ್‌ಬಿಐ ದಾಖಲೆಗಳ ಮೂಲಕ 'ಸಾಯಿಸಿದೆ'!

ಇಳಿವಯಸ್ಸಿನಲ್ಲೂ ಆರೋಗ್ಯವಂತವಾಗಿರುವ ನೈಪಾಲ್ ಅವರು ಎಫ್‌ಬಿಐ ಪ್ರಕಾರ ಸಾವನ್ನಪ್ಪಿದ್ದಾರೆ!. ಹೌದು, ಷಿಕಾಗೋ ಕೋರ್ಟ್‌ಗೆ ಸಲ್ಲಿಸಿದ ತನ್ನ ವರದಿಯಲ್ಲಿ 77ರ ಹರೆಯದ ನೈಪಾಲ್ ಅವರನ್ನು ದಿವಂಗತ ನೈಪಾಲ್ ಎಂದು ಎಫ್‌ಬಿಐ ನಮೂದಿಸಿದೆ. ಕೋರ್ಟ್‌ಗೆ ವರದಿ ಸಲ್ಲಿಸಿದ ಬಳಿಕವಷ್ಟೇ ಈ ಮಹಾಪ್ರಮಾದದ ಅರಿವಾಗಿದೆ.

ಡ್ಯಾನಿಶ್ ಪತ್ರಿಕೆಯ ಉದ್ಯೋಗಿಗಳ ಮೇಲೆ ದಾಳಿಗೆ ಸಂಚು ರೂಪಿಸಿದ ಇಬ್ಬರು ಆರೋಪಿಗಳ ವಿಚಾರಣಾ ವರದಿಯಲ್ಲಿ ನೈಪಾಲ್ ಹೆಸರು ನಮೂದಾಗಿತ್ತು. ನೈಪಾಲ್ ಪತ್ನಿ ಪತ್ರಕರ್ತೆಯಾಗಿದ್ದಾರೆ. ಇವರು ಉಗ್ರರಿಂದ ಸಾವನ್ನಪ್ಪಿದ ಪಾಕ್ ಸೇನಾ ಜನರಲ್ ಒಬ್ಬರ ತಂಗಿಯೂ ಹೌದು.
ಸಂಬಂಧಿತ ಮಾಹಿತಿ ಹುಡುಕಿ