ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸ್ಫೋಟಕ್ಕೆ ಬ್ಲ್ಯಾಕ್‌ವಾಟರ್ ಕೈವಾಡ: ಹಕೀಮುಲ್ಲಾ ಆರೋಪ (Islamabad | Blackwater | Peshawar | Mehsud)
Feedback Print Bookmark and Share
 
ಪೇಶಾವರದ ಮಾರುಕಟ್ಟೆಯಲ್ಲಿ ಸಂಭವಿಸಿದ ಮಾರಕ ಬಾಂಬ್ ಸ್ಫೋಟಕ್ಕೆ ಅಮೆರಿಕದ ವಿವಾದಾತ್ಮಕ ಭದ್ರತಾ ಸಂಸ್ಥೆ ಬ್ಲಾಕ್‌ವಾಟರ್ ಕೈವಾಡ ನಡೆಸಿದೆ ಎಂದು ತಾಲಿಬಾನ್ ಮುಖಂಡ ಹಕೀಮುಲ್ಲಾ ಮೆಹ್ಸೂದ್ ಆರೋಪಿಸಿದ್ದಾನೆ.

ಇಸ್ಲಾಮಾಬಾದ್‌ನಲ್ಲಿ ದಾಳಿಗಳನ್ನು ನಡೆಸಲು ಮತ್ತು ಸೇನೆಯ ಮುಖ್ಯಕಚೇರಿ ಮೇಲೆ ಗುರಿಯಿಡಲು ತಾಲಿಬಾನ್ ಸಾಮರ್ಥ್ಯ ಹೊಂದಿರುವಾಗ ತಾಲಿಬಾನ್ ಸಾರ್ವಜನಿಕರ ಮೇಲೆ ಏಕೆ ಗುರಿಯಿರಿಸುತ್ತದೆಂದು ಹಕೀಮುಲ್ಲಾ ಪ್ರಶ್ನಿಸಿದ್ದು, ಪೇಶಾವಾರ ದಾಳಿಗೆ ತನ್ನ ಸಂಘಟನೆ ಹೊಣೆಯಲ್ಲವೆಂದು ಸೂಚ್ಯವಾಗಿ ತಿಳಿಸಿದ್ದಾನೆ. ಬಿಬಿಸಿ ಉರ್ದುಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವನು, ಉಗ್ರಗಾಮಿಗಳಿಗೆ ಕಳಂಕ ತರಲು ಬ್ಲ್ಯಾಕ್‌ವಾಟರ್ ಮತ್ತು ಪಾಕಿಸ್ತಾನ ಸಂಸ್ಥೆಗಳು ದಾಳಿಗಳಲ್ಲಿ ಭಾಗಿಯಾಗಿವೆಯೆಂದು ಹೇಳಿದ್ದಾನೆ.

ಪೇಶಾವರದ ಕಿಕ್ಕಿರಿದ ಮಾರುಕಟ್ಟೆಯಲ್ಲಿ ಕಳೆದ ಬುಧವಾರ ಶಕ್ತಿಶಾಲಿ ಬಾಂಬ್ ಸ್ಫೋಟಿಸಿ, 100ಕ್ಕೂ ಹೆಚ್ಚು ಜನರು ಅಸುನೀಗಿದ್ದು, ಯಾವುದೇ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಬ್ಲ್ಯಾಕ್‌ವಾಟರ್ ಸ್ಥಳೀಯ ಭದ್ರತಾಸಂಸ್ಥೆಗಳ ಜತೆ ಕೈಗೂಡಿಸಿ ರಾಷ್ಟ್ರದಲ್ಲಿ ತನ್ನ ಉಪಸ್ಥಿತಿಯನ್ನು ಸ್ಥಾಪಿಸಿದೆಯೆಂದು ಪಾಕಿಸ್ತಾನ ಮಾಧ್ಯಮದ ವರದಿಗಳು ತಿಳಿಸಿವೆ. ಆದರೆ ಇವೆಲ್ಲ ಆರೋಪಗಳನ್ನು ಅಮೆರಿಕ ಆಡಳಿತ ನಿರಾಕರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ