ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತಕ್ಕೆ ಪ್ರಯಾಣಿಸುವ ಪೌರರಿಗೆ ಅಮೆರಿಕ ಎಚ್ಚರಿಕೆ (Citizens | India | United States | Lashkar)
Feedback Print Bookmark and Share
 
ಅಮೆರಿಕದ ಪೌರನನ್ನು ಬಳಸಿಕೊಂಡು ಭಾರತದಲ್ಲಿ ಭಯೋತ್ಪಾದನೆ ದಾಳಿ ನಡೆಸುವ ಲಷ್ಕರೆ ತೊಯ್ಬಾ ಸಂಚನ್ನು ಎಫ್‌ಬಿಐ ಬಯಲುಮಾಡಿದ ಕೆಲವು ದಿನಗಳ ಬಳಿಕ ಭಾರತಕ್ಕೆ ಪ್ರಯಾಣಿಸುವ ಸಂದರ್ಭದಲ್ಲಿ ಕಟ್ಟೆಚ್ಚರದಲ್ಲಿ ಇರುವಂತೆ ಅಮೆರಿಕ ತನ್ನ ಪೌರರಿಗೆ ಸಲಹೆ ಮಾಡಿದೆ.

ಭಯೋತ್ಪಾದನೆ ಗುಂಪುಗಳು ಭಾರತದ ಮೇಲೆ ದಾಳಿಗಳಿಗೆ ಯೋಜಿಸುತ್ತಿದೆಯೆಂದು ಅಮೆರಿಕ ಸರ್ಕಾರಕ್ಕೆ ಮಾಹಿತಿಗಳು ಹರಿದುಬರುತ್ತಿದೆಯೆಂದು ವಿದೇಶಾಂಗ ಇಲಾಖೆಯು ಭಾರತಕ್ಕೆ ಪ್ರವಾಸ ಮಾಡುವ ಅಮೆರಿಕನ್ನರಿಗೆ ಎಚ್ಚರಿಸಿದೆ.

ಹಬ್ಬದ ಋತುಮಾನ ಆರಂಭಕ್ಕೆ ಮುಂಚೆ ವಿದೇಶಾಂಗ ಇಲಾಖೆ ಇದೇರೀತಿಯ ಪ್ರಯಾಣ ಕಟ್ಟೆಚ್ಚರವನ್ನು ನೀಡಿತ್ತು.ಅಮೆರಿಕನ್ನರು ಅಥವಾ ಪಾಶ್ಚಿಮಾತ್ಯರು ಭೇಟಿ ಮಾಡುವ ಅಥವಾ ಕಲೆಯುವ ಸ್ಥಳಗಳ ಮೇಲೆ ದಾಳಿ ನಡೆಸಲು ಭಯೋತ್ಪಾದಕರು ಮತ್ತು ಅವರ ಸಹಾನುಭೂತಿಗಾರರು ತಮ್ಮ ಇಚ್ಛೆಯನ್ನು ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆಂದು ವಿದೇಶಾಂಗ ಇಲಾಖೆಯ ಕಾನ್ಸುಲರ್ ವ್ಯವಹಾರಗಳ ಬ್ಯೂರೊ ತಿಳಿಸಿದೆ.

ಇತ್ತೀಚಿನ ಪ್ರವಾಸ ಕಟ್ಟೆಚ್ಚರವು ಮುಂದಿನ ವರ್ಷದ ಜ.28ರವರೆಗೆ ಊರ್ಜಿತವಾಗಲಿದೆಯೆಂದು ಇಲಾಖೆ ತಿಳಿಸಿದ್ದು, ಕಳೆದ ನವೆಂಬರ್‌ನಲ್ಲಿ ಮುಂಬೈ ಭಯೋತ್ಪಾದನೆ ದಾಳಿಗಳ ಹಿನ್ನೆಲೆಯಲ್ಲಿ ಭಯೋತ್ಪಾದಕ ಗುಂಪುಗಳಿಗೆ ಹೊಟೆಲ್‌ಗಳು ಮತ್ತು ಸಾರ್ವಜನಿಕ ಸ್ಥಳಗಳು ಮುಖ್ಯಗುರಿಗಳು ಎಂಬುದನ್ನು ನೆನಪಿಸುತ್ತದೆಂದು ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ