ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಲ್ ಖಾಯಿದಾ ಉಪಸ್ಥಿತಿ ಗೊತ್ತಿಲ್ಲವೇ?: ಕ್ಲಿಂಟನ್ ಪ್ರಶ್ನೆ (Clinton | Pakistan | Al-Qaeda | Lahore)
Feedback Print Bookmark and Share
 
ಅಲ್ ಖಾಯಿದಾ ನಾಯಕತ್ವವು ಪಾಕಿಸ್ತಾನದಲ್ಲಿ ಬೀಡು ಬಿಟ್ಟಿದೆಯೆಂದು ಪಾಕಿಸ್ತಾನಕ್ಕೆ ಮ‌ೂರು ದಿನಗಳ ಪ್ರವಾಸ ಕೈಗೊಂಡಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ತಿಳಿಸಿದ್ದು, ನಾಗರಿಕ ಸರ್ಕಾರಕ್ಕೆ ಅಲ್ ಖಾಯಿದಾ ಉಪಸ್ಥಿತಿ ಕುರಿತು ಯಾವುದೇ ಸುಳಿವು ಸಿಗದಿರುವುದು ನಂಬುವುದೇ ಕಷ್ಟವೆಂದು ಹೇಳಿದ್ದಾರೆ.

ಅಲ್ ಖಾಯಿದಾ ಎಲ್ಲಿದೆಯೆಂದು ನಿಮ್ಮ ಸರ್ಕಾರದಲ್ಲಿ ಯಾರಿಗೂ ತಿಳಿಯದಿರುವುದು ನಂಬಲಸಾಧ್ಯವಾಗಿದೆಯೆಂದು ಪಾಕಿಸ್ತಾನಕ್ಕೆ ಕ್ಲಿಂಟನ್ ಹೇಳಿಕೆ ಉಲ್ಲೇಖಿಸಿ ಡೇಲಿ ಟೈಮ್ಸ್ ವರದಿ ಮಾಡಿದೆ. ನಮಗೆ ತಿಳಿದಿರುವ ಮಟ್ಟಿಗೆ ಅಲ್ ಖಾಯಿದಾ ಪಾಕಿಸ್ತಾನದಲ್ಲಿದೆಯೆಂದು ಕ್ಲಿಂಟನ್ ಮಾಧ್ಯಮದ ವ್ಯಕ್ತಿಗಳಿಗೆ ತಿಳಿಸಿದರು.

ಪಾಕಿಸ್ತಾನ ಅಸಂಖ್ಯಾತ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಹೆಚ್ಚುತ್ತಿರುವ ಜನಸಂಖ್ಯೆ ಸಮಸ್ಯೆಯನ್ನು ಅದು ನಿಭಾಯಿಸಬೇಕು ಎಂದು ಕ್ಲಿಂಟನ್ ಪ್ರತಿಪಾದಿಸಿದರು. ಕ್ಲಿಂಟನ್ ಅವರು ಸೇನಾ ಸಿಬ್ಬಂದಿ ಮುಖ್ಯಸ್ಥ ಅಸ್ಫಖ್ ಪರ್ವೇಜ್ ಖಯಾನಿ ಅವರನ್ನು ರಾವಲ್ಪಿಂಡಿಯ ಮುಖ್ಯಕಚೇರಿಯಲ್ಲಿ ಭೇಟಿ ಮಾಡಿ, ಭದ್ರತಾ ಸಂಬಂಧಿತ ವಿಷಯಗಳನ್ನು ಕುರಿತು ವಿಚಾರವಿನಿಮಯ ನಡೆಸಿದರು.

ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಸಹಕಾರ ಸೇರಿದಂತೆ ಪಾಕಿಸ್ತಾನ-ಅಮೆರಿಕ ವ್ಯೂಹಾತ್ಮಕ ಸಂಬಂಧ, ತಾಲಿಬಾನ್ ವಿರುದ್ಧ ಪ್ರಸಕ್ತ ಮಿಲಿಟರಿ ಕಾರ್ಯಾಚರಣೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಎಂದು ಮ‌ೂಲಗಳು ಹೇಳಿವೆ.

ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ಅಮೆರಿಕ ವಿಶೇಷ ಪ್ರತಿನಿಧಿ ರಿಚರ್ಡ್ ಹಾಲ್‌ಬ್ರೂಕ್, ಪಾಕಿಸ್ತಾನದಲ್ಲಿ ಅಮೆರಿಕ ರಾಯಭಾರಿ ಅನ್ನೆ ಡಬ್ಲ್ಯು ಪೀಟರ್‌ಸನ್, ಐಎಸ್‌ಐ ಪ್ರಧಾನನಿರ್ದೇಶಕ ಲೆ.ಜ. ಅಹ್ಮದ್ ಶೂಜಾ ಪಾಶಾ ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ಕೆರಿ ಲೂಗಾರ್ ಮಸೂದೆ ಮತ್ತು ಗುಪ್ತ ಮಾಹಿತಿ ಹಂಚಿಕೆ ಮುಂತಾದ ವಿಷಯಗಳು ಕೂಡ ಚರ್ಚೆಯಾಯಿತು ಎಂದು ಮ‌ೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ