ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ರಾಯಭಾರಿಗೆ ಎಫ್‌ಬಿಐ ಬಂಧಿಸಿದ ಉಗ್ರರ ಪರಿಚಯ (Pakistan | Chicago | Rana | India)
Feedback Print Bookmark and Share
 
ಲಷ್ಕರೆ ತೊಯ್ಬಾ ಪ್ರಚೋದನೆ ಮೇಲೆ ಭಾರತದಲ್ಲಿ ಪ್ರಮುಖ ಭಯೋತ್ಪಾದನೆ ದಾಳಿ ನಡೆಸಲು ಯೋಜಿಸಿದ ಕಾರಣಕ್ಕಾಗಿ ಎಫ್‌ಬಿಐ ಸೆರೆಹಿಡಿದಿರುವ ಡೇವಿಡ್ ಕೋಲ್‌ಮನ್ ಹೆಡ್ಲೆ ಮತ್ತು ತಹಾವರ್ ಹುಸೇನ್ ರಾನಾ ಇಬ್ಬರನ್ನೂ ಚಿಕಾಗೊದ ಪಾಕಿಸ್ತಾನದ ಕಾನ್ಸಲ್ ಜನರಲ್ ವೈಯಕ್ತಿಕವಾಗಿ ತಿಳಿದಿದ್ದರೆಂದು ಪಾಕಿಸ್ತಾನದ ಅಧಿಕಾರಿಗಳು ಹೇಳಿದ್ದಾರೆ.

ಚಿಕಾಗೊ ಕೋರ್ಟ್‌ನಲ್ಲಿ ಎಫ್‌ಬಿಐ ಸಲ್ಲಿಸಿದ ಪರಿಷ್ಕೃತ ಆರೋಪಪಟ್ಟಿಯಲ್ಲಿ, ರಾನಾ ಮತ್ತು ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿ ಅವರನ್ನು ಪಾಕಿಸ್ತಾನದ ಕಾನ್ಸಲ್ ಜನರಲ್ ವೈಯಕ್ತಿಕವಾಗಿ ತಿಳಿದಿದ್ದು, ಎಲ್ಲ ಮ‌ೂವರು ಒಂದೇ ಪ್ರೌಢಶಾಲೆಯಲ್ಲಿ ಓದಿದ್ದಾಗಿ ತಿಳಿಸಿದೆ. ಪಾಕಿಸ್ತಾನ ರಾಯಭಾರ ಕಚೇರಿಯ ವೆಬ್‌ಸೈಟ್ ಪ್ರಕಾರ, ಚಿಕಾಗೊನಲ್ಲಿ ಡಾ.ಅಮನ್ ರಷೀದ್ ಕಾನ್ಸಲ್ ಜನರಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸೆ.25ರಂದು ರಾನಾ ಚಿಕಾಗೊನ ಪಾಕಿಸ್ತಾನ ಕಾನ್ಸುಲೇಟ್‌ನಲ್ಲಿ ಕಾನ್ಸಲ್ ಜನರಲ್ ಜತೆ ದೂರವಾಣಿಯಲ್ಲಿ ಮಾತನಾಡಿ, ಹೆಡ್ಲೆಗೆ ಪಾಕಿಸ್ತಾನ ಪ್ರವಾಸಕ್ಕೆ 5 ವರ್ಷಗಳ ವೀಸಾ ನೀಡಲು ಪ್ರಯತ್ನಿಸಿದರೆಂದು ಎಫ್‌ಬಿಐ ತಿಳಿಸಿದೆ. ಭಯೋತ್ಪಾದನೆ ಸಂಚಿಗೆ ಸಂಬಂಧಪಡದ ಈಮೇಲ್ ಸಂದೇಶಗಳಿಂದ ಕಾನ್ಸಲ್ ಜನರಲ್ ಅವರನ್ನು ರಾನಾ ಮತ್ತು ಹೆಡ್ಲೆ ಅವರನ್ನು ವೈಯಕ್ತಿಕವಾಗಿ ತಿಳಿದಿದ್ದರೆಂದು ಸ್ಪಷ್ಟಪಟ್ಟಿದ್ದಾಗಿ ಎಫ್‌ಬಿಐ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ