ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಾಡೆನ್ ವಿಡಿಯೊ ಚಿತ್ರ ಅಮೆರಿಕ ವಿಶ್ಲೇಷಣೆ (Video tape | Al-Qaeda | Laden | Website)
Feedback Print Bookmark and Share
 
ಅಲ್ ಖಾಯಿದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್‌ನ ಹೊಸ ವಿಡಿಯೊ ಟೇಪ್‌ನ ಪ್ರತಿಯೊಂದು ಅಮೆರಿಕ ಸರ್ಕಾರಕ್ಕೆ ಸಿಕ್ಕಿದ್ದು, ಅದರ ವಿಶ್ಲೇಷಣೆ ನಡೆಸುತ್ತಿದೆಯೆಂದು ಅಮೆರಿಕದ ಪ್ರಮುಖ ಸುದ್ದಿ ಚಾನೆಲ್ ಸಿಎನ್‌ಎನ್ ಶುಕ್ರವಾರ ವರದಿ ಮಾಡಿದೆ. ಅದು ನಿಜವಾಗಲೂ ಬಿನ್ ಲಾಡೆನ್ ಚಿತ್ರವೇ ಅಥವಾ ಟೇಪ್ ಹಳೆಯದೋ, ಹೊಸದೋ ಎಂದು ತಪಾಸಣೆ ಮಾಡಲಾಗುತ್ತಿದೆ ಎಂದು ಹೆಸರುಹೇಳಲು ಬಯಸದ ಮ‌ೂಲವೊಂದನ್ನು ಉಲ್ಲೇಖಿಸಿ ಸುದ್ದಿ ಚಾನೆಲ್ ತಿಳಿಸಿದೆ.

ಅಮೆರಿಕದ ಮೇಲೆ ಸೆ.11ರ ದಾಳಿಯ 6ನೇ ವಾರ್ಷಿಕದಂದು ಅಮೆರಿಕದ ಜನರನ್ನು ಉದ್ದೇಶಿಸಿ ಮಾತನಾಡುವ ವಿಡಿಯೊವನ್ನು ಅಲ್ ಖಾಯಿದಾ ನಾಯಕ ಬಿಡುಗಡೆ ಮಾಡುತ್ತಾನೆಂದು ಇದಕ್ಕೆ ಮುಂಚಿತವಾಗಿ ಇಸ್ಲಾಮಿಕ್ ವೆಬ್‌ಸೈಟ್ ತಿಳಿಸಿತ್ತು.

ಅಲ್ ಖಾಯಿದಾದ ಮಾಧ್ಯಮ ಅಲ್ ಸಾಹಬ್ ಆಗಾಗ್ಗೆ ಸಂದೇಶಗಳನ್ನು ನೀಡುವ ವೆಬ್‌ಸೈಟ್‌ನಲ್ಲಿ ಹೊಸ ವಿಡಿಯೊ ಕಾಣಿಸಿಕೊಳ್ಳುತ್ತದೆಂದು ಪ್ರಕಟಣೆ ತಿಳಿಸಿದೆ. ವಿಡಿಯೊದ ಸ್ತಬ್ಧ ಛಾಯಾಚಿತ್ರದಲ್ಲಿ ಬಿನ್ ಲಾಡನ್ ಕ್ಯಾಮೆರಾ ಎದುರು ನಿಂತು ಮಾತನಾಡುತ್ತಿದ್ದು, ಅವನ ಗಡ್ಡವನ್ನು ಕಪ್ಪು ಬಣ್ಣಕ್ಕೆ ಡೈ ಮಾಡಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ