ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ಕಷ್ಟಕಾಲದಲ್ಲಿದೆಯೆಂದು ಒಪ್ಪಿಕೊಂಡ ಅಮೆರಿಕ (Taliban | United States | Pakistan | Militants)
Feedback Print Bookmark and Share
 
ಪಾಕಿಸ್ತಾನದಾದ್ಯಂತ ತಾಲಿಬಾನ್ ಉಗ್ರಗಾಮಿಗಳು ದಾಳಿಗಳನ್ನು ಮುಂದುವರಿಸಿ ಅನೇಕ ಮಂದಿಯ ಅಮಾಯಕ ಜನರು ಪ್ರಾಣ ಕಳೆದುಕೊಂಡ ಫಲವಾಗಿ ಪಾಕಿಸ್ತಾನಕ್ಕೆ ಇದು ಕಷ್ಟಕಾಲವೆಂದು ಅಮೆರಿಕ ಒಪ್ಪಿಕೊಂಡಿದೆ.

ಪಾಕಿಸ್ತಾನ ಪಾಶವೀ ಭಯೋತ್ಪಾದಕರನ್ನು ಮತ್ತು ದೇಶೀಯ ಬಂಡುಕೋರರನ್ನು ನಿಭಾಯಿಸುತ್ತಿರುವುದರಿಂದ ಅವರಿಗೆ ಕಷ್ಟಕಾಲ ಬಂದೊದಗಿದೆಯೆಂದು ರಾಜ್ಯವಿದೇಶಾಂಗ ಇಲಾಖೆಯ ವಕ್ತಾರ ಐಯಾನ್ ಕೆಲ್ಲಿ ಸುದ್ದಿಗೋಷ್ಠಿಯಲ್ಲಿ ವರದಿಗಾರರಿಗೆ ತಿಳಿಸಿದರು.

ಕಳೆದ ಕೆಲವು ವಾರಗಳಲ್ಲಿ ಸರಣಿ ಭಯೋತ್ಪಾದನೆ ದಾಳಿಗಳನ್ನು ಉಲ್ಲೇಖಿಸಿ ಮಾತನಾಡಿದ ಕೆಲ್ಲಿ, ಉತ್ತರ ಮತ್ತು ದಕ್ಷಿಣ ವಜಿರಿಸ್ತಾನದಲ್ಲಿ ಸೇನೆಯ ಕಾರ್ಯಾಚರಣೆ ಸಂದರ್ಭದಲ್ಲಿ ಮತ್ತು ನಂತರ ಹೇಯ ಬಾಂಬ್ ದಾಳಿಗಳು ಮತ್ತು ಹತ್ಯೆಗಳು ಹೆಚ್ಚಿವೆ.ಇದು ಪಾಕಿಸ್ತಾನಕ್ಕೆ ಕಷ್ಟಕಾಲವೆಂದು ಒಬಾಮಾ ಆಡಳಿತ ಗುರುತಿಸಿದ್ದು, ದೇಶವನ್ನು ಕರಾಳ ಯುಗಕ್ಕೆ ಒಯ್ಯಲು ಬಯಸುವ ಉಗ್ರಗಾಮಿಗಳ ವಿರುದ್ಧ ಹೋರಾಟವೆಂದು ನಾವು ಗುರುತಿಸಿದ್ದೇವೆಂದು ಹೇಳಿದ್ದಾರೆ.

ಹಿಲರಿ ಕ್ಲಿಂಟನ್ ಆಗಮಿಸಿದ ದಿನವೇ ಬಾಂಬ್ ದಾಳಿ ನಡೆಸಿದ ಬಗ್ಗೆ ತಾವು ಹೆಚ್ಚಿಗೆ ಏನೂ ಹೇಳುವುದಿಲ್ಲ. ಇದು ಉಭಯ ಎದುರಿಸುತ್ತಿರುವ ಸಮಾನ ಸವಾಲಿನ ಗಂಭೀರತೆಯ ಲಕ್ಷಣವಾಗಿದೆಯೆಂದು ಅವರು ನುಡಿದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ