ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಒಬಾಮಾ ಸರ್ಕಾರದಲ್ಲಿ ಮತ್ತೊಬ್ಬ ಭಾರತೀಯ (Obama | America | India | DD | Clinton)
Feedback Print Bookmark and Share
 
ND
ಅಮೆರಿಕ ಒಬಾಮಾ ಸರ್ಕಾರದಲ್ಲಿ ಮತ್ತೊಬ್ಬ ಭಾರತೀಯನ ಸೇರ್ಪಡೆಯಾಗಿದೆ. ಭಾರತ ಮೂಲದ ಸುರೇಶ್ ಕುಮಾರ್‌ಗೆ ಅಮೆರಿಕ ಸರ್ಕಾರ ಪ್ರಮುಖ ಆಡಳಿತ ಹುದ್ದೆಯನ್ನು ನೀಡಿದೆ.

ಒಬಾಮಾ ಸರ್ಕಾರ ಶುಕ್ರವಾರ ಈ ನೇಮಕ ಮಾಡಿದ್ದು, ಸುರೇಶ್ ಸಹಾಯಕ ವಾಣಿಜ್ಯ ಸಚಿವ ಮತ್ತು ಅಮೆರಿಕ ಮತ್ತು ವಿದೇಶಿ ವಾಣಿಜ್ಯ ಸೇವೆಗಳ ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಸುರೇಶ್ 1970-85ರಲ್ಲಿ ಭಾರತದ ದೂರದರ್ಶನದಲ್ಲಿ ವಾರ್ತಾವಾಚಕರಾಗಿದ್ದರು. ಅಲ್ಲದೆ, ಕ್ಲಿಂಟನ್ ಪ್ರತಿಷ್ಠಾನದ ವಿಶೇಷ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸಿದ್ದರು. ಸುರೇಶ್ ಕುಮಾರ್ ದೆಹಲಿ ವಿವಿಯಿಂದ ಪದವಿಯನ್ನೂ ಮುಂಬೈ ವಿವಿಯಿಂದ ಎಂಬಿಎ ಪದವಿಯನ್ನೂ ಪಡೆದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ