ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಣು ಒಪ್ಪಂದ ವಿಶ್ವಕ್ಕೆ ಭಾರತದ ಪಾಸ್‌ಪೋರ್ಟ್: ಬುಷ್ (New Delhi | Bush | India | Nuclear deal)
Feedback Print Bookmark and Share
 
ವಾಷಿಂಗ್ಟನ್ ಮತ್ತು ನವದೆಹಲಿ ಅಂಕಿತ ಹಾಕಿದ ಅಣು ಒಪ್ಪಂದವು ಜಗತ್ತಿಗೆ ಭಾರತದ ಪರವಾನಗಿ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಶನಿವಾರ ಬಣ್ಣಿಸಿದ್ದು, ಅಣು ಒಪ್ಪಂದವು ಭಾರತದ ಆರ್ಥಿಕತೆಗೆ ಶಕ್ತಿಯನ್ನು ತುಂಬುತ್ತದೆಂದು ಹೇಳಿದ್ದಾರೆ.

ಶನಿವಾರ ನಾಯಕತ್ವ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಬುಷ್, ಭಾರತ ಜಗತ್ತಿನಲ್ಲಿ ಸೂಕ್ತ ಸ್ಥಾನವನ್ನು ಸಂಪಾದಿಸಲು ಒಪ್ಪಂದ ನೆರವಾಗುತ್ತದೆಂದು ಹೇಳಿದ್ದಾರೆ.

ಬುಷ್ ಅವರ 8 ವರ್ಷಗಳ ಅಧಿಕಾರಾವಧಿಯ ವಿದೇಶಾಂಗ ನೀತಿಯು ಅಮೆರಿಕದ ವಿಕೇಂದ್ರೀಕರಣ ಅಧಿಕಾರದಲ್ಲಿ ದೃಢ ನಂಬಿಕೆಯ ಸಂಕೇತವಾಗಿದ್ದು, ಅವರ ವಿದೇಶಾಂಗ ನೀತಿಯಲ್ಲಿ ಭಾರತ ಆದ್ಯತೆಯ ರಾಷ್ಟ್ರವಾಗಿತ್ತೆಂದು ಹೇಳಿದ್ದಾರೆ. ಭಾರತ ಮತ್ತು ಅಮೆರಿಕ ಸಮಾನ ಮೌಲ್ಯಗಳನ್ನು ಹಂಚಿಕೊಂಡಿದ್ದು, ಭಾರತಕ್ಕೆ ಹಿಂತಿರುಗಿ ಬಂದಿರುವುದು ತಮಗೆ ಹೆಮ್ಮೆಯೆನಿಸುತ್ತದೆಂದು ಹೇಳಿದ್ದಾರೆ.

ಅಮೆರಿಕ ಭಾರತದ ಜತೆ ವಿಶೇಷ ಬಂಧುತ್ವದ ಭಾವನೆ ಹೊಂದಿದ್ದು, ಭಾರತವನ್ನು ಚೈತನ್ಯಶೀಲ ಮತ್ತು ಆಧುನಿಕ ರಾಷ್ಟ್ರವೆಂದು ಬಣ್ಣಿಸಿದ್ದಾರೆ. ನಿಮ್ಮ ಪ್ರಧಾನಮಂತ್ರಿ ಕಂಡರೆ ತಮಗೆ ಇಷ್ಟವೆಂದೂ, ಅವರನ್ನು ಸ್ನೇಹಿತರೆಂದು ಕರೆಯಲು ಹೆಮ್ಮೆಯಾಗುತ್ತದೆಂದು ನುಡಿದಿದ್ದಾರೆ. ಸಿಂಗ್ ಅವರನ್ನು ಬುದ್ಧಿವಂತ ನಾಯಕ ಎಂದೂ ಬುಷ್ ಶ್ಲಾಘಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ