ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಎಚ್‌ಐವಿ ವ್ಯಕ್ತಿಗಳಿಗೆ ನಿಷೇಧ ತೆರವಿಗೆ ಅಮೆರಿಕ ನಿರ್ಧಾರ (HIV | Obama | United States | Bush)
Feedback Print Bookmark and Share
 
ದೇಶಕ್ಕೆ ಎಚ್‌ಐವಿ ಸೋಂಕಿತ ವ್ಯಕ್ತಿಗಳಿಗೆ ಪ್ರವೇಶವನ್ನು 20 ವರ್ಷಗಳಿಂದ ನಿಷೇಧಿಸಿದ್ದ ಅಮೆರಿಕ ನಿಷೇಧವನ್ನು ತೆರವು ಮಾಡುವ ಕ್ರಮಕ್ಕೆ ಮುಂದಾಗಿದೆ. ಈ ಕುರಿತು ವರದಿಗಾರರ ಜತೆ ಮಾತನಾಡಿದ ಅಧ್ಯಕ್ಷ ಬರಾಕ್ ಒಬಾಮಾ, ಮುಂದಿನ ವರ್ಷಾರಂಭದಲ್ಲಿ ಅಮೆರಿಕಕ್ಕೆ ಎಚ್‌ಐವಿ ಪೀಡಿತ ವ್ಯಕ್ತಿಗಳ ಪ್ರವಾಸ ನಿಷೇಧವನ್ನು ರದ್ದುಮಾಡಲಾಗುವುದು ಎಂದು ಹೇಳಿದ್ದಾರೆ.

ಮಾಜಿ ಅಧ್ಯಕ್ಷ ಬುಷ್ ಆಡಳಿತಾವಧಿಯಲ್ಲಿ ಆರಂಭವಾದ ಆದೇಶದ ಪ್ರಕ್ರಿಯೆಯನ್ನು ಸೋಮವಾರ ಮುಗಿಸುವುದಾಗಿ ಒಬಾಮಾ ತಿಳಿಸಿದ್ದಾರೆ. ಎಚ್‌ಐವಿ ಸ್ಥಿತಿಗತಿಯ ಆಧಾರದ ಮೇಲೆ ಪ್ರವಾಸಿಗಳಿಗೆ ಪ್ರವೇಶ ನಿಷೇಧಿಸಿರುವ 12 ರಾಷ್ಟ್ರಗಳಲ್ಲಿ ಅಮೆರಿಕ ಒಂದಾಗಿದ್ದು, ಕಳೆದ 20 ವರ್ಷಗಳಿಂದ ಈ ನಿಷೇಧ ಜಾರಿಯಲ್ಲಿದೆ. ನಾವು ಎಚ್‌ಐವಿ/ಏಡ್ಸ್ ನಿಗ್ರಹಕ್ಕೆ ಜಾಗತಿಕ ಮುಖಂಡರಾಗ ಬಯಸಿದ್ದರೆ, ಈ ರೀತಿ ಕ್ರಮ ಕೈಗೊಳ್ಳಬೇಕಾಗುತ್ತದೆಂದು ರಯಾನ್ ವೈಟ್ ಎಚ್‌ಐವಿ/ಏಡ್ಸ್ ಕಾರ್ಯಕ್ರಮ ವಿಸ್ತರಣೆ ಮಸೂದೆಗೆ ಸಹಿ ಹಾಕುವುದಕ್ಕೆ ಮುಂಚಿತವಾಗಿ ಶ್ವೇತಭವನದಲ್ಲಿ ಹೇಳಿದ್ದಾರೆ. 1990ರಲ್ಲಿ ಆರಂಭವಾದ ಕಾರ್ಯಕ್ರಮವು ವೈದ್ಯಕೀಯ ಆರೈಕೆ, ಔಷಧಿ, ಪೂರಕ ಸೇವೆಯನ್ನು ಸುಮಾರು 5 ಲಕ್ಷ ಎಚ್‌ಐವಿ ಅಥವಾ ಏಡ್ಸ್ ಪೀಡಿತ ಅಮೆರಿಕನ್ನರಿಗೆ ಒದಗಿಸುತ್ತಿದೆ. ಈ ಮಸೂದೆಯು 13 ವರ್ಷ ಪ್ರಾಯದಲ್ಲೇ ರಕ್ತಪೂರೈಕೆಯಿಂದ ಏಡ್ಸ್ ಕಾಯಿಲೆಗೆ ಗುರಿಯಾದ ಅಪ್ರಾಪ್ತ ಬಾಲಕನ ಹೆಸರಿನಲ್ಲಿದೆ.

ರಯಾನ್ ವೈಟ್ ಏಡ್ಸ್ 1980ರ ದಶಕದಲ್ಲಿ ಏಡ್ಸ್ ಸಂಬಂಧಿತ ತಾರತಮ್ಯದ ವಿರುದ್ಧ ಹೋರಾಟ ನಡೆಸಿ ರೋಗದ ಬಗ್ಗೆ ಅಮೆರಿಕನ್ನರಿಗೆ ತಿಳಿವಳಿಕೆ ಮ‌ೂಡಿಸಿದ್ದು, 1990ರ ಏಪ್ರಿಲ್‌ನಲ್ಲಿ ಮೃತಪಟ್ಟ. 1987ರಲ್ಲಿ ಎಚ್‌ಐವಿ ಬಗ್ಗೆ ವ್ಯಾಪಕ ಭಯ ಮತ್ತು ಅಜ್ಞಾನ ತುಂಬಿಕೊಂಡ ಕಾಲದಲ್ಲಿ, ಆರೋಗ್ಯ ಮತ್ತು ಮಾನವ ಸೇವೆ ಇಲಾಖೆಯು ಅಂಟು ಜಾಡ್ಯದ ಪಟ್ಟಿಯಲ್ಲಿ ಅದನ್ನು ಸೇರಿಸಿ, ಎಚ್‌ಐವಿ ಪೀಡಿತರು ಅಮೆರಿಕ ಪ್ರವೇಶಕ್ಕೆ ನಿಷೇಧ ವಿಧಿಸಲಾಯಿತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಎಚ್ಐವಿ, ಅಮೆರಿಕ, ಬುಷ್, ಒಬಾಮಾ