ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬಸ್ ಚೀನಾದ ಕಣಿವೆಗೆ ಉರುಳಿ 13 ಸಾವು (China | Shanx | Yangquan | Valley)
Feedback Print Bookmark and Share
 
ಚೀನಾದ ಉತ್ತರ ಶಾಂಕ್ಸಿ ಪ್ರಾಂತ್ಯದ ಪರ್ವತಚ್ಛಾದಿತ ರಸ್ತೆಯಲ್ಲಿ ಬಸ್ಸೊಂದು ಕಣಿವೆಯೊಂದಕ್ಕೆ ಉರುಳಿಬಿದ್ದು 13 ಜನರು ಸತ್ತಿದ್ದಾರೆ ಮತ್ತು 40 ಮಂದಿ ಗಾಯಗೊಂಡಿದ್ದಾರೆಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ಮಧ್ಯಾಹ್ನ, ಯಾಂಗ್‌ಕಾನ್ ನಗರದ ಕಣಿವೆಗೆ ಬಸ್ ಬಿದ್ದ ಕೂಡಲೇ 10 ಮಂದಿ ಪ್ರಯಾಣಿಕರು ತಕ್ಷಣವೇ ಸತ್ತರು. ಇನ್ನೂ ಮ‌ೂವರು ಆಸ್ಪತ್ರೆಗೆ ಹೋಗುವ ಮಾರ್ಗದಲ್ಲಿ ಸತ್ತಿದ್ದಾರೆಂದು ಅಧಿಕೃತ ಕ್ಸಿನುವಾ ಸುದ್ದಿಸಂಸ್ಥೆ ತಿಳಿಸಿದೆ. ವೈದ್ಯರು ಸುಮಾರು 41 ಗಾಯಗೊಂಡ ಪ್ರಯಾಣಿಕರ ಚಿಕಿತ್ಸೆ ಕೈಗೊಂಡಿದ್ದಾರೆಂದು ಅದು ತಿಳಿಸಿದೆ.

ಹೆಬೈ ಪ್ರಾಂತ್ಯದಿಂದ ಶಾಂಕ್ಸಿ ರಾಜಧಾನಿ ಟೈಯಾನ್‌ಗೆ ಬಸ್ ಪ್ರಯಾಣಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ