ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನಾಡಿಗೆ ಬಂದ ಕಾಡಿನ ಮಹಿಳೆಗೆ ಆಸ್ಪತ್ರೆವಾಸ (Forest | Town | Combodia | Roshan)
Feedback Print Bookmark and Share
 
ಕಾಡಿನಲ್ಲೇ ಸುಮಾರು 18 ವರ್ಷಗಳಷ್ಟು ಕಾಲ ಜೀವನ ಸವೆಸಿ ಕಾಂಬೋಡಿಯದಲ್ಲಿ ಸುದ್ದಿ ಮಾಡಿದ ಕಾಡಿನ ಮಹಿಳೆಯು ನಗರಕ್ಕೆ ಬಂದ ಬಳಿಕ ಇಲ್ಲಿನ ಆಹಾರ ಸ್ವೀಕರಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅವಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುಮಾರು 10 ವರ್ಷ ಪ್ರಾಯದ ಬಾಲಕಿಯಾಗಿದ್ದ ರೊಶೊಮ್ ಪಿಂಜಿಯೆಂಗ್ ನೀರೆಮ್ಮೆ ಮೇಲೆ ಪ್ರಯಾಣ ಹೊರಟಿದ್ದ ಸಂದರ್ಭದಲ್ಲಿ ರತನಕ್ಕಿರಿ ಪ್ರಾಂತ್ಯದಲ್ಲಿ ನಾಪತ್ತೆಯಾಗಿದ್ದಳು.

ಬಳಿಕ 18 ವರ್ಷಗಳವರೆಗೆ ಕಾಣೆಯಾಗಿದ್ದ ಬಾಲಕಿ ಕಾಡಿನಲ್ಲೇ ಸುದೀರ್ಘ ಜೀವನ ಸವೆಸಿ ಕಾಡುಪ್ರಾಣಿಗಳ ರೀತಿಯಲ್ಲೇ ವರ್ತಿಸುತ್ತಿದ್ದಳೆಂದು ವರದಿಯಾಗಿದೆ. 2007ರಲ್ಲಿ ಆಕೆಯು ಕೃಷಿಕನೊಬ್ಬನ ಕೈಯಲ್ಲಿದ್ದ ಆಹಾರವನ್ನು ಕಸಿಯಲು ಯತ್ನಿಸಿದ ಸಂದರ್ಭದಲ್ಲಿ ಆಕೆಯನ್ನು ಹಿಡಿಯಲಾಗಿತ್ತು.

ನಗ್ನತೆಯಿಂದ ಕೂಡಿ ಕೊಳಕನ್ನು ಮೈಯಲ್ಲಿ ಮೆತ್ತಿಕೊಂಡಿದ್ದ ಆಕೆ ಪ್ರಾಣಿಯಂತೆ ವರ್ತನೆ ತೋರಿಸುತ್ತಿದ್ದರಿಂದ ನಾಡಿಗೆ ಕರೆತರಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕಾಂಬೋಡಿಯ, ರೊಶೊಮ್, ರತನಕ್ಕಿರಿ