ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್‌: ನೆಲಬಾಂಬ್ ಸ್ಫೋಟಕ್ಕೆ 7 ಸೈನಿಕರ ಬಲಿ (Taliban | Pakistan | Militants | Khyber)
Feedback Print Bookmark and Share
 
ವಾಯವ್ಯ ಪಾಕಿಸ್ತಾನದ ಕಡಿದಾದ ಬುಡಕಟ್ಟು ಪ್ರದೇಶದಲ್ಲಿ ಶಂಕಿತ ತಾಲಿಬಾನ್ ಉಗ್ರಗಾಮಿಗಳು ರಸ್ತೆಬದಿಯಲ್ಲಿ ನೆಲಬಾಂಬ್ ಸ್ಫೋಟಿಸಿದ್ದರಿಂದ ಅರೆಮಿಲಿಟರಿ ಪಡೆಯ 7 ಸೈನಿಕರು ಶನಿವಾರ ಅಸುನೀಗಿದ್ದಾರೆ.

ಎಲ್ಲ ಉಗ್ರಗಾಮಿಗಳನ್ನು ಮ‌ೂಲೋತ್ಪಾಟನೆ ಮಾಡುವ ತನಕ ಉಗ್ರರ ಭದ್ರನೆಲೆಗಳಲ್ಲಿ ಮಿಲಿಟರಿ ಕಾರ್ಯಾಚರಣೆ ಮುಂದುವರಿಸುವುದಾಗಿ ರಾಷ್ಟ್ರದ ಅಧ್ಯಕ್ಷರು ಶಪಥ ತೊಟ್ಟ ಬಳಿಕ ಉಗ್ರಗಾಮಿಗಳು ರಕ್ತದೋಕುಳಿ ಹರಿಸಿದ್ದಾರೆ.

ಅಮೆರಿಕ ಮತ್ತು ನ್ಯಾಟೊ ಪಡೆಗಳಿಗೆ ಆಹಾರ ಮತ್ತಿತರ ಸಾಮಗ್ರಿಗಳನ್ನು ಪೂರೈಸುವ ಮಾರ್ಗ ಕೈಬರ್ ಪ್ರದೇಶದಲ್ಲಿ ಸೈನಿಕರು ಶನಿವಾರ ಪ್ರವಾಸ ಮಾಡುತ್ತಿದ್ದಾಗ, ಬಾಂಬ್ ಸ್ಫೋಟಿಸಿತೆಂದು ಸ್ಥಳೀಯ ಅಧಿಕಾರಿ ಗುಲಾಂ ಫರೂಕ್ ಖಾನ್ ತಿಳಿಸಿದ್ದಾರೆ. ಇನ್ನೊಂದು ಬುಡಕಟ್ಟು ಪ್ರದೇಶದಲ್ಲಿ ತಾಲಿಬಾನ್ ಉಗ್ರರು 6 ಕೋಣೆಗಳ ಬಾಲಕರ ಶಾಲೆಯನ್ನು ಸ್ಫೋಟಿಸಿದ್ದಾರೆ. ಆಧುನಿಕ ಶಿಕ್ಷಣಕ್ಕೆ ಸೆಡ್ಡುಹೊಡಿದಿರುವ ತಾಲಿಬಾನಿಗಳಿಂದ ಇದು ಇತ್ತೀಚಿನ ದಾಳಿಯಾಗಿದೆ.

ಏತನ್ಮಧ್ಯೆ, ಪಾಕಿಸ್ತಾನದ ಜೆಟ್ ವಿಮಾನಗಳು, ತಾಲಿಬಾನ್ ಮುಖಂಡ ಹಕೀಮುಲ್ಲಾ ಮೆಹ್ಸೂದ್‌ನ ಓರ್ಕಜಾಯ್ ಬುಡಕಟ್ಟು ಪ್ರದೇಶದ ಮ‌ೂರು ಅಡಗುತಾಣಗಳ ಮೇಲೆ ಬಾಂಬ್ ದಾಳಿ ನಡೆಸಿದ್ದು, ಕನಿಷ್ಠ 8 ಮಂದಿ ಉಗ್ರಗಾಮಿಗಳು ಹತರಾಗಿದ್ದಾರೆ ಮತ್ತು ಅನೇಕ ಮಂದಿ ಗಾಯಗೊಂಡಿದ್ದಾರೆಂದು ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ