ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಸಬ್ ಸೇರಿ 14 ಮಂದಿ 'ತಪ್ಪಿಸಿಕೊಂಡವರು': ಪಾಕ್ ಕೋರ್ಟ್ (Kasab | Absconders | Mumbai | Malik)
Feedback Print Bookmark and Share
 
ಮುಂಬೈ ಭಯೋತ್ಪಾದನೆ ದಾಳಿಗಳಿಗೆ ಸಂಬಂಧಪಟ್ಟಂತೆ 7 ಶಂಕಿತರ ವಿಚಾರಣೆ ನಡೆಸುತ್ತಿರುವ ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ಕೋರ್ಟ್, ತಪ್ಪಿಸಿಕೊಂಡಿದ್ದಾರೆಂದು ಘೋಷಿಸಿದ ಇತರೆ 14 ಮಂದಿ ಆರೋಪಿಗಳಲ್ಲಿ ಅಜ್ಮಲ್ ಕಸಬ್‌ನನ್ನೂ ಸೇರಿಸಿದ್ದು, ನವೆಂಬರ್ 7ಕ್ಕೆ ವಿಚಾರಣೆಯನ್ನು ಮುಂದೂಡಿದೆ.

ಇಂದು ನಡೆದ ವಿಚಾರಣೆ ಕಾಲದಲ್ಲಿ, ನ್ಯಾಯಾಧೀಶ ಮಲಿಕ್ ಮಹಮದ್ ಅಕ್ರಮ್ ಅವಾನ್ ಅವರು, ಭಾರತದ ಜೈಲಿನಲ್ಲಿ ಬಂಧಿಯಾಗಿರುವ ಕಸಬ್ ಸೇರಿದಂತೆ ದಾಳಿಯಲ್ಲಿ ನಂಟು ಹೊಂದಿದ 14 ಶಂಕಿತರನ್ನು 'ತಪ್ಪಿಸಿಕೊಂಡವರು' ಎಂದು ಘೋಷಿಸಿದ್ದಾಗಿ ಮ‌ೂಲಗಳು ತಿಳಿಸಿವೆ.ಇನ್ನುಳಿದ 13 ಶಂಕಿತ ಆರೋಪಿಗಳ ಬಗ್ಗೆ ವಿವರಗಳು ಲಭ್ಯವಿಲ್ಲ.

ಪಾಕಿಸ್ತಾನ ಆಡಳಿತ ಬಂಧಿಸಿದ ಲಷ್ಕರೆ ತೊಯ್ಬಾ ಕಮಾಂಡರ್ ಜಾಕಿವುರ್ ರೆಹ್ಮಾನ್ ಲಖ್ವಿಯನ್ನು ಪ್ರತಿನಿಧಿಸುವ ಕ್ವಾಜಾ ಸುಲ್ತಾನ್, ನ್ಯಾಯಾಧೀಶ ಅವಾನ್ ಎಂ ಮುಂದಿನ ಶನಿವಾರದವರೆಗೆ ಪ್ರಕರಣವನ್ನು ಮುಂದೂಡಿದರೆಂದು ತಿಳಿಸಿದರು.

ಅ.10ರಂದು ನಡೆದ ವಿಚಾರಣೆ ಕಾಲದಲ್ಲಿ ತಮ್ಮನ್ನು ತಪ್ಪಿತಸ್ಥರನ್ನಾಗಿ ಮಾಡಿದ ವಿಧಾನದ ಬಗ್ಗೆಇಂದಿನ ವಿಚಾರಣೆಯಲ್ಲಿ ಆರೋಪಿಗಳಿಂದ ಆಕ್ಷೇಪಣೆಗಳು ಕೇಳಿಬಂದವು. ಇದಕ್ಕೆ ಮುಂಚೆ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಬಾಕಿರ್ ಅಲಿ ರಾನಾ, ಆರೋಪಿಗಳ ಪರ ವಕೀಲರ ಗೈರುಹಾಜರಿಯಲ್ಲೇ ಆರೋಪ ಹೊರಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ