ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇಸ್ಲಾಮಿಕ್ ಉಗ್ರರಿಂದ ಹುಡುಗಿಯರ ಶಾಲೆ ಧ್ವಂಸ (Militant | Pakistan | girls school | Khyber)
Feedback Print Bookmark and Share
 
ಪಾಕಿಸ್ತಾನದ ಖೈಬರ್ ಬುಡಕಟ್ಟು ಜಿಲ್ಲೆಯ ಹುಡುಗಿಯರ ಸರಕಾರಿ ಶಾಲೆಯೊಂದನ್ನು ಇಸ್ಲಾಮಿಕ್ ಉಗ್ರರು ಸ್ಫೋಟಿಸಿದ್ದು, ಕಟ್ಟಡವನ್ನು ಸಂಪೂರ್ಣ ನಾಶಗೊಳಿಸಿದ್ದಾರೆ. ಘಟನೆಯಲ್ಲಿ ಅಕ್ಕಪಕ್ಕದ ಮನೆಯ ನಾಲ್ವರಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರಿಘರ್ ಗ್ರಾಮದಲ್ಲಿನ 18 ಕೊಠಡಿಯಿರುವ ಹುಡುಗಿಯರ ಸರಕಾರಿ ಪ್ರೌಢ ಶಾಲೆಯನ್ನು ಉಗ್ರರು ಎರಡು ಸ್ಫೋಟಕಗಳನ್ನು ಉಡಾಯಿಸುವ ಮೂಲಕ ಧ್ವಂಸಗೊಳಿಸಿದ್ದಾರೆ. ಶಾಲೆಯ ಉಸ್ತುವಾರಿ ನೋಡಿಕೊಳ್ಳುವ ಹುಡುಗನೊಬ್ಬ ಇದೀಗ ಕಾಣೆಯಾಗಿದ್ದು, ಉಗ್ರರು ಅಪಹರಿಸಿರುವ ಸಾಧ್ಯತೆಗಳಿವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ಸ್ಫೋಟಗಳನ್ನು ನಡೆಸುವ ಮೂಲಕ ಶಾಲೆಯನ್ನು ಉಗ್ರರು ನಾಶಪಡಿಸಿದರು. ಇಲ್ಲಿನ ಎಲ್ಲಾ ಕೊಠಡಿಗಳು ಧ್ವಂಸಗೊಂಡಿವೆ. ಅಕ್ಕಪಕ್ಕದ ಮನೆಗಳಿಗೂ ಅಲ್ಪ ಹಾನಿಯಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ. ನಾವು ಈಗ ಕಾಣೆಯಾಗಿರುವ ಹುಡುಗನಿಗೆ ಏನಾಗಿದೆ ಎಂಬುದನ್ನು ಪತ್ತೆ ಹಚ್ಚಲು ಯತ್ನಿಸುತ್ತಿದ್ದೇವೆ ಎಂದು ಸ್ಥಳೀಯ ಅಧಿಕಾರಿ ಶಫೀರ್ ಉಲ್ಲಾಹ್ ಹೇಳಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ದೇಶದ ವಾಯುವ್ಯ ಪ್ರಾಂತ್ಯದಲ್ಲಿನ ನೂರಾರು ಶಾಲೆಗಳನ್ನು ಉಗ್ರರು ನಾಶಗೊಳಿಸಿದ್ದು, ಅವುಗಳಲ್ಲಿ ಬಹುತೇಕ ಹುಡುಗಿಯರ ಶಾಲೆಗಳು. ಶರಿಯತ್ ಕಾನೂನನ್ನು ಸ್ವಾಂತ್ ಪ್ರಾಂತ್ಯದಲ್ಲಿ ಜಾರಿಗೊಳಿಸುವ ಸಂದರ್ಭದಲ್ಲಿ ಜಿಲ್ಲೆಯ ಸುಮಾರು 200 ಶಾಲೆಗಳನ್ನು ತಾಲಿಬಾನ್ ಉಗ್ರರು ಧ್ವಂಸಗೊಳಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ