ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬಲೂಚಿಸ್ತಾನದಲ್ಲಿ ಭಾರತ ಕೈವಾಡ ಸಾಕ್ಷಿಯಿಲ್ಲ: ಅಮೆರಿಕಾ (Balochistan | India | Pakistan | Hillary Clinton)
Feedback Print Bookmark and Share
 
ಬಲೂಚಿಸ್ತಾನದಲ್ಲಿ ಭಾರತವು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂಬ ಪಾಕಿಸ್ತಾನ ಆರೋಪಗಳ ನಡುವೆ ಪ್ರತಿಕ್ರಿಯಿಸಿರುವ ಅಮೆರಿಕಾ, ಈ ಬಗ್ಗೆ ತಾನು ಯಾವುದೇ ಸಾಕ್ಷ್ಯಗಳನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ.

ಬಲೂಚಿಸ್ತಾನದಲ್ಲಿ ಭಾರತ ವಹಿಸುತ್ತಿರುವ ಪಾತ್ರದ ಬಗ್ಗೆ ನಮ್ಮಲ್ಲಿ ಯಾವುದೇ ಪುರಾವೆಗಳಿಲ್ಲ ಎಂದು ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ತಿಳಿಸಿದ್ದಾರೆ.

ಬಲೂಚಿಸ್ತಾನದಲ್ಲಿನ ಸಮಸ್ಯೆಗಳಿಗೆ ಭಾರತ ಕಾರಣ ಎಂದು ಹಲವು ಪಾಕಿಸ್ತಾನೀಯರು ನಂಬಿದ್ದಾರೆ ಎಂದು ಪಾಕಿಸ್ತಾನದ ಸಂಪಾದಕರು ಕ್ಲಿಂಟನ್‌ಗೆ ತಿಳಿಸಿದರು. ಸಂಪಾದಕರ ಜತೆಗಿನ ಸಂವಾದದೊಂದಿಗೆ ತನ್ನ ಮೂರು ದಿನಗಳ ಪಾಕಿಸ್ತಾನ ಭೇಟಿಯನ್ನು ಕ್ಲಿಂಟನ್ ಮುಗಿಸಿದ್ದಾರೆ.

ಬಲೂಚಿಸ್ತಾನವು ತೀರಾ ಅಶಾಂತಿಯುತ ಪ್ರಾಂತ್ಯವೆಂಬುದನ್ನು ಒಪ್ಪಿಕೊಂಡಿರುವ ಕ್ಲಿಂಟನ್, ಭಾರತವು ಬಲೂಚಿಸ್ತಾನದಲ್ಲಿ ಅಶಾಂತಿಗೆ ಕಾರಣವಾಗಿದೆ ಎಂಬ ಯಾವುದೇ ಪುರಾವೆಗಳನ್ನು ಪಾಕಿಸ್ತಾನದಿಂದ ತಾನು ಪಡೆದಿಲ್ಲ ಎಂದರು.

ಅಂತಹ ಯಾವುದೇ ಸಾಕ್ಷ್ಯಗಳನ್ನು ನಾನು ಕಂಡಿಲ್ಲ. ಹಾಗಾಗಿ ನಿಮ್ಮ ವಾದವನ್ನು ನಾನು ಒಪ್ಪಲಾರೆ. ಯಾಕೆಂದರೆ ನಾನು ವೈಯಕ್ತಿಕವಾಗಿ ಅದರ ಬಗ್ಗೆ ಯಾವುದೇ ಮಾಹಿತಿಗಳನ್ನು ಹೊಂದಿಲ್ಲ ಎಂದು ಅವರು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ