ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಉಗ್ರಗಾಮಿಗಳ ಆದೇಶಕ್ಕೆ ಮಣಿಯಬೇಡಿ: ಖುರೇಷಿ ಕರೆ (Kuala Lumpur | Terrorists | Pakistan | Indo-Pak)
Feedback Print Bookmark and Share
 
ಭಾರತ-ಪಾಕ್ ಶಾಂತಿ ಪ್ರಕ್ರಿಯೆಯನ್ನು ವಿಧ್ವಂಸಗೊಳಿಸಲು ಭಯೋತ್ಪಾದಕರು ಬಯಸಿದ್ದಾರೆಂದು ಪಾಕಿಸ್ತಾನ ಸೋಮವಾರ ತಿಳಿಸಿದ್ದು, ಉಗ್ರಗಾಮಿಗಳಿಂದ ಆದೇಶಕ್ಕೆ ಮಣಿಯಲು ಉಭಯ ರಾಷ್ಟ್ರಗಳು ಅವಕಾಶ ನೀಡಬಾರದೆಂದು ಹೇಳಿದೆ.

ಈ ಕುರಿತು ಮಾತನಾಡಿದ ವಿದೇಶಾಂಗ ಸಚಿವ ಶಾ ಮೆಹಮ‌ೂದ್ ಖುರೇಷಿ, ಯಾವುದೇ ರಾಷ್ಟ್ರದ ವಿರುದ್ಧ ಭಯೋತ್ಪಾದನೆ ಕೃತ್ಯಗಳನ್ನು ಬಳಸಲು ಪಾಕಿಸ್ತಾನ ತನ್ನ ನೆಲದಲ್ಲಿ ಅವಕಾಶ ನೀಡುವುದಿಲ್ಲವೆಂದು ತಿಳಿಸುತ್ತಾ, ಇದಕ್ಕೆ ಪ್ರತಿಯಾಗಿ ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಭಾರತ ಸಕಾರಾತ್ಮಕ ಸಂಜ್ಞೆಗಳನ್ನು ತೋರಿಸಬೇಕೆಂದು ನುಡಿದರು.

ಕಳೆದ ವರ್ಷದ ಮುಂಬೈ ಭಯೋತ್ಪಾದನೆ ದಾಳಿಗಳ ನಂತರ ಭಾರತ ಶಾಂತಿ ಪ್ರಕ್ರಿಯೆಗೆ ವಿರಾಮ ಹಾಕಿದ್ದು, ಜಂಟಿ ಮಾತುಕತೆ ಆರಂಭಕ್ಕೆ ಭಯೋತ್ಪಾದಕರ ವಿರುದ್ಧ ಪಾಕಿಸ್ತಾನ ಕೈಗೊಳ್ಳುವ ಕ್ರಮಗಳಿಗೆ ನಂಟು ಕಲ್ಪಿಸಿದೆ. ಪಾಕಿಸ್ತಾನ ಮತ್ತು ಭಾರತದ ನಡುವೆ ಶಾಂತಿ ಪ್ರಕ್ರಿಯೆ ನಾಶಕ್ಕೆ ಭಯೋತ್ಪಾದಕರು ಸಂಚು ರೂಪಿಸಿದ್ದಾರೆಂದು ನಾವು ದೃಢವಾಗಿ ನಂಬುತ್ತೇವೆ. ಉಭಯ ರಾಷ್ಟ್ರಗಳು ಉಗ್ರಗಾಮಿಗಳ ಆದೇಶಕ್ಕೆ ಮಣಿಯಬಾರದು ಎಂದು ಖುರೇಷಿ ಸಂದರ್ಶನವೊಂದರಲ್ಲಿ ಮಲೇಶಿಯ ಸುದ್ದಿ ಏಜನ್ಸಿಗೆ ತಿಳಿಸಿದ್ದಾರೆ.

ಮಂಗಳವಾರ ಆರಂಭವಾಗುವ ಡಿ-8 ಅಭಿವೃದ್ಧಿಶೀಲ ಇಸ್ಲಾಮಿಕ್ ರಾಷ್ಟ್ರಗಳ ಗುಂಪಿನ ಸಭೆಯಲ್ಲಿ ಭಾಗವಹಿಸಲು ಖುರೇಷಿ ಇಲ್ಲಿಗೆ ಆಗಮಿಸಿದ್ದು, ಭಯೋತ್ಪಾದನೆಯು ಸಮಾನ ಸವಾಲಾಗಿದ್ದು, ಜಂಟಿ ಪ್ರತಿಕ್ರಿಯೆ ಅಗತ್ಯವಾಗಿದೆಯೆಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ