ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತಾಲಿಬಾನ್ ನಾಯಕರ ತಲೆಗಳಿಗೆ 5 ದ.ಲಕ್ಷ $ ಬಹುಮಾನ (Pakistan | Taliban | Mehsud | Drone)
Feedback Print Bookmark and Share
 
ತಾಲಿಬಾನ್ ನಾಯಕ ಹಕೀಮುಲ್ಲಾ ಮೆಹ್ಸೂದ್ ಮತ್ತು 18 ಮಂದಿ ಸಂಗಡಿಗರ ಸಾವಿಗೆ ಅಥವಾ ಜೀವಂತವಾಗಿ ಸೆರೆಹಿಡಿಯಲು ಉಪಯುಕ್ತವಾಗುವ ಮಾಹಿತಿ ನೀಡಿದರೆ, 5 ದಶಲಕ್ಷ ಡಾಲರ್ ಮೌಲ್ಯದ ಬಹುಮಾನ ನೀಡುವುದಾಗಿ ಪಾಕಿಸ್ತಾನ ಸೋಮವಾರ ಘೋಷಿಸಿದೆ.

ಉನ್ನತ ದರ್ಜೆಯ ತೆಹ್ರೀಕ್ ಎ ತಾಲಿಬಾನ್ ಉಗ್ರಗಾಮಿಗಳ ಜೀವಂತ ಸೆರೆಗೆ ಅಥವಾ ಸಾವಿಗೆ ಸುಳಿವು ನೀಡಿದರೆ ಬಹುಮಾನವನ್ನು ನೀಡುವುದಾಗಿ ಸುದ್ದಿಪತ್ರಿಕೆಯ ಕಪ್ಪು ಮತ್ತು ಬಿಳಿ ಬಣ್ಣದ ಜಾಹೀರಾತಿನಲ್ಲಿ ಸುದ್ದಿಪತ್ರಿಕೆಯ ಮುಖಪುಟದಲ್ಲಿ ನೀಡಲಾಗಿದ್ದು, ಭಾನುವಾರ ರಾತ್ರಿ ಪಾಕಿಸ್ತಾನದ ಟೆಲಿವಿಷನ್ ಚಾನೆಲ್‌ಗಳು ಬಿತ್ತರಿಸಿವೆ.

ಹಕೀಮುಲ್ಲಾ ಮೆಹ್ಸೂದ್ ಪೂರ್ವಾಧಿಕಾರಿ ಬೈತುಲ್ಲಾ ಮೆಹ್ಸೂದ್ ಅಮೆರಿಕದ ಡ್ರೋನ್ ದಾಳಿಯಲ್ಲಿ ಹತ್ಯೆಯಾದ ಬಳಿಕ ತಾಲಿಬಾನ್ ನಾಯಕತ್ವ ವಹಿಸಿಕೊಂಡ ಮೆಹ್ಸೂದ್ ತಲೆಗೆ 50 ದಶಲಕ್ಷ ಪಾಕಿಸ್ತಾನ ರೂಪಾಯಿ ಬಹುಮಾನ ಘೋಷಿಸಲಾಗಿದೆ.ಪಾಕಿಸ್ತಾನದಲ್ಲಿ ಅತ್ಯಂತ ಭೀಕರ ದಾಳಿಗಳಿಗೆ ತಾಲಿಬಾನ್ ವಿರುದ್ಧ ಆರೋಪ ಹೊರಿಸಲಾಗಿದ್ದು, ಕಳೆದ ಎರಡು ವರ್ಷಗಳಲ್ಲಿ ಮಾರಣಾಂತಿಕ ಕಗ್ಗೊಲೆಗಳಿಗೆ 2400 ಜನರು ಹತರಾಗಿದ್ದಾರೆ.

ಇತ್ತೀಚೆಗೆ ಪಾಕಿಸ್ತಾನದಲ್ಲಿ ರಕ್ತದೋಕುಳಿಗೆ ತಾನೇ ಹೊಣೆಯೆಂದು ತಾಲಿಬಾನ್ ಕಟ್ಟಾವಾದಿ ಬಣ ಹೇಳಿಕೊಂಡಿದ್ದು, ಈ ದಾಳಿಗಳಿಗೆ 300ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ದಕ್ಷಿಣ ವಾಜಿರಿಸ್ತಾನದಲ್ಲಿ ಮಿಲಿಟರಿ ಭೂದಾಳಿಗಳನ್ನು ನಡೆಸುತ್ತಿರುವ ನಡುವೆ ಉಗ್ರರ ಅಟಾಟೋಪ ಹೆಚ್ಚಿದೆ.

ಈ ಕ್ರೂರಿ ಹಂತಕರು ಮೆಹ್ಸೂದ್ ಬುಡಕಟ್ಟು ಜನರಿಗಲ್ಲದೇ ಇಡೀ ಪಾಕಿಸ್ತಾನ ಮತ್ತು ಜಗತ್ತಿಗೆ ಕೆಟ್ಟ ಹೆಸರು ತರುತ್ತಿದ್ದಾರೆಂದು ಜಾಹೀರಾತು ತಿಳಿಸಿದೆ. ಈ ಜನರಿಗೆ ಖಂಡಿತವಾಗಿ ಶಿಕ್ಷೆ ಬೇಕಾಗಿದೆ. ಅವರು ಮಾನವತೆಯ ಹಂತಕರು. ಅವರ ಮ‌ೂಲೋತ್ಪಾಟನೆಗೆ ಪಾಕಿಸ್ತಾನಕ್ಕೆ ಸಹಾಯ ಮಾಡಿ ಎಂದು ಜಾಹೀರಾತು ಕೋರಿದೆ.
ಸಂಬಂಧಿತ ಮಾಹಿತಿ ಹುಡುಕಿ