ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ರಾವಲ್ಪಿಂಡಿ ಹೊಟೆಲ್‌ನಲ್ಲಿ ಬಾಂಬ್ ಸ್ಫೋಟಕ್ಕೆ 29 ಬಲಿ (Rawalpindi | Blast | Shalimar | Pakistan)
Feedback Print Bookmark and Share
 
ಪಾಕಿಸ್ತಾನದಲ್ಲಿ ಉಗ್ರಗಾಮಿಗಳು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದು, ರಾವಲ್ಪಿಂಡಿಯ ಗ್ಯಾರಿಸನ್ ನಗರದ ಸೇನಾ ಮುಖ್ಯಕಚೇರಿ ಬಳಿಯಿರುವ ಬಿಗಿಭದ್ರತೆಯ ಹೊಟೆಲ್ ಹೊರಗೆ ಸಂಭವಿಸಿದ ಶಕ್ತಿಶಾಲಿ ಸ್ಫೋಟದಲ್ಲಿ 29 ಜನರು ಹತರಾಗಿದ್ದು, ಅನೇಕ ಮಂದಿ ಗಾಯಗೊಂಡಿದ್ದಾರೆ. ಮಾಲ್ ರಸ್ತೆಯ ಶಾಲಿಮಾರ್ ಹೊಟೆಲ್‌ನ ಆವರಣದಲ್ಲಿ ಬೆಳಿಗ್ಗೆ 10.40ಕ್ಕೆ ಸಂಭವಿಸಿದ ಸ್ಫೋಟದಲ್ಲಿ ಗಣನೀಯ ಹಾನಿ ಉಂಟಾಗಿದೆ.

ಶಾಲಿಮಾರ್ ಹೊಟೆಲ್ ಸೇನೆಯ ಮುಖ್ಯಕಚೇರಿಗೆ ಅತೀ ಹತ್ತಿರದಲ್ಲೇ ಇದೆ. ಮೋಟರ್‌ಸೈಕಲ್‌ನಲ್ಲಿ ಆಗಮಸಿದ ಆತ್ಮಾಹುತಿ ದಾಳಿಕೋರ ಬಾಂಬ್‌ನ್ನು ಸ್ಫೋಟಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಅನೇಕ ಮಂದಿ ಸೇನಾಧಿಕಾರಿಗಳ ಮೆಸ್‌ಗಳು, ಸೂಕ್ಷ್ಮ ಮಿಲಿಟರಿ ನೆಲೆಗಳು ಮತ್ತಿತರ ಹೊಟೆಲ್‌ಗಳು, ಬ್ಯಾಂಕೊಂದು ಕೂಡ ಕಟ್ಟಡದ ಸಮೀಪದಲ್ಲಿವೆ.

ಮಿಲಿಟರಿ ಪೊಲೀಸರು ಮತ್ತು ಅರೆಮಿಲಿಟರಿ ಸಿಬ್ಬಂದಿ ಈ ಪ್ರದೇಶವನ್ನು ಸುತ್ತುವರಿದಿದ್ದು, ಹೊಟೆಲ್ ಮುಂದಿರುವ ರಸ್ತೆಯಲ್ಲಿ ವಾಹನಸಂಚಾರದ ಮಾರ್ಗ ಬದಲಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗಾಗಿ ಆಂಬುಲೆನ್ಸ್ ಮತ್ತು ಅಗ್ನಿಶಾಮಕ ವಾಹನಗಳು ಧಾವಿಸಿವೆ. ರಾವಲ್ಪಿಂಡಿಯ ಆಸ್ಪತ್ರೆಗಳಲ್ಲಿ ತುರ್ತುಸ್ಥಿತಿ ಘೋಷಿಸಲಾಗಿದೆ.

ದಾಳಿಯಲ್ಲಿ ಸುಮಾರು 10 ಜನರು ಸತ್ತಿದ್ದಾರೆಂದು ಪ್ರತ್ಯಕ್ಷದರ್ಶಿಗಳು ಮತ್ತು ಟಿವಿ ನ್ಯೂಸ್ ವರದಿಗಾರರು ತಿಳಿಸಿದ್ದಾರೆ. ಸೇನಾ ಮುಖ್ಯಕಚೇರಿಯಲ್ಲಿ ಭೀಕರ ದಾಳಿ ನಡೆದ ಸುಮಾರು ಒಂದು ತಿಂಗಳಲ್ಲೇ ಈ ದಾಳಿ ನಡೆದಿದೆ. ಕಳೆದ ತಿಂಗಳು ತಾಲಿಬಾನ್ ವಿರುದ್ಧ ಸೇನೆಯ ಕಾರ್ಯಾಚರಣೆ ಆರಂಭವಾದ ಬಳಿಕ, ತಾಲಿಬಾನ್ ಅನೇಕ ಪ್ರತೀಕಾರದ ದಾಳಿಗಳನ್ನು ನಡೆಸುತ್ತಿದ್ದು, ಪೇಶಾವರದಲ್ಲಿ ಸಂಭವಿಸಿದ ಕಾರ್ ಬಾಂಬ್ ಸ್ಫೋಟದಲ್ಲಿ 100 ಜನರು ಬಲಿಯಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ