ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಳಂಕಿತ ಶಿಕ್ಷಣ ಸಚಿವರನ್ನು ವಜಾ ಮಾಡಿದ ಚೀನಾ (China | Beijing | Zhou Ji | Corruption)
Feedback Print Bookmark and Share
 
ಭ್ರಷ್ಟಾಚಾರ ಹಗರಣದಲ್ಲಿ ಕಳಂಕಿತರಾಗಿದ್ದ, ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ವ್ಯಾಪಕ ಅಸಮಾಧಾನ ಕೇಳಿಬಂದಿದ್ದರಿಂದ ಚೀನಾದ ಶಾಸಕಾಂಗವು ದೇಶದ ಶಿಕ್ಷಣಸಚಿವರನ್ನು ವಜಾ ಮಾಡಿದೆ. ರಾಷ್ಟ್ರೀಯ ಶಾಸಕಾಂಗದ ಕಾರ್ಯನಿರ್ವಾಹಕ ಸಮಿತಿ ಶನಿವಾರ ಝೌ ಜಿಯನ್ನು ವಜಾ ಮಾಡಿದ್ದು, ಅವರ ಬದಲಿಗೆ ಉಪಶಿಕ್ಷಣ ಸಚಿವರನ್ನು ನೇಮಿಸಿದೆ.

63ರ ಪ್ರಾಯದ ಅಮೆರಿಕನ್ ಶಿಕ್ಷಣ ಪಡೆದ ಝೌ ನಿವೃತ್ತರಾಗಲು ಇನ್ನು ಕೇವಲ ಎರಡು ವರ್ಷಗಳು ಬಾಕಿವುಳಿದಿತ್ತು.ಚೀನಾ ಮುನ್ನಡೆಗೆ ನ್ಯಾಯವಾದ ಮಾರ್ಗವೆಂದು ಚೀನಾ ಸಾಂಪ್ರದಾಯಿಕವಾಗಿ ನಂಬಿಕೆಯಿರಿಸಿದ್ದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಚೀನಾ ನಿರ್ಧರಿಸಿದ್ದರಿಂದ ಝೌ ಅವರನ್ನು ವಜಾ ಮಾಡುವ ಆಶ್ಚರ್ಯಕರ ಕ್ರಮ ಕೈಗೊಂಡಿದೆ.

ಶಿಕ್ಷಣಕ್ಷೇತ್ರವು ಪ್ರಾಥಮಿಕ ಮತ್ತು ಪ್ರೌಢಶಾಲೆ ಮಟ್ಟಗಳಲ್ಲಿ ನಿಧಿಗಳಕೊರತೆ ಮತ್ತು ಉನ್ನತ ಶಿಕ್ಷಣದಲ್ಲಿ ಕಳಪೆಗುಣಮಟ್ಟದ ಸಮಸ್ಯೆಗಳನ್ನು ಎದುರಿಸುತ್ತಿದೆ. ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ ಶಾಸಕಾಂಗ ಕಳೆದ ಬಾರಿ ಭೇಟಿಯಾಗಿದ್ದಾಗ, ಹೊಸ ಕ್ಯಾಬಿನೆಟ್‌ನಲ್ಲಿ ಐದು ವರ್ಷಗಳ ಅವಧಿಗೆ ಮತ ನೀಡಲು ಸಭೆ ಸೇರಿತ್ತು.

ಆಗ ಝೌ ಅವರು ಬೇರಾವುದೇ ಸಚಿವರಿಗಿಂತ ಅತ್ಯಧಿಕ ಸಂಖ್ಯೆಯ ನಕಾರಾತ್ಮಕ ಮತಗಳನ್ನು ಗಳಿಸಿದ್ದರು. ವುಹಾನ್ ವಿವಿಯಲ್ಲಿ ಲಂಚ ಸ್ವೀಕರಿಸಿದ ಆರೋಪಕ್ಕಾಗಿ ಇಬ್ಬರು ಹಿರಿಯ ಆಡಳಿತಗಾರರನ್ನು ಬಂಧಿಸಿದ ಕೆಲವು ವಾರಗಳ ಬಳಿಕ ಝೌ ವಜಾ ಆದೇಶ ಹೊರಬಿದ್ದಿದೆ.
ಸಂಬಂಧಿತ ಮಾಹಿತಿ ಹುಡುಕಿ