ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕದಿಂದ ಶ್ರೀಲಂಕಾ ಸೇನಾ ಮುಖ್ಯಸ್ಥರ ತನಿಖೆಗೆ ಆಕ್ಷೇಪ (Sri Lanka | Army chief | Tamil Tigers | Fonseka)
Feedback Print Bookmark and Share
 
ತಮಿಳು ವ್ಯಾಘ್ರಗಳ ಜತೆ ಸಮರದಲ್ಲಿ ಮಾನವ ಹಕ್ಕು ಉಲ್ಲಂಘನೆಗಳ ಆರೋಪ ಕುರಿತು ತಮ್ಮ ಸೇನೆಯ ಮುಖ್ಯಸ್ಥರನ್ನು ಅಮೆರಿಕ ಸರ್ಕಾರ ಪ್ರಶ್ನಿಸಿದ ಕ್ರಮಕ್ಕೆ ಶ್ರೀಲಂಕಾ ಆಕ್ಷೇಪ ವ್ಯಕ್ತಪಡಿಸಿದೆ.

ಓಕ್ಲೋಹಾಮಾದಲ್ಲಿರುವ ತಮ್ಮ ಪುತ್ರಿಯರ ಭೇಟಿ ಸಲುವಾಗಿ ಜನರಲ್ ಸರತ್ ಫೋನ್‌ಸೆಕಾ ಪ್ರಸಕ್ತ ಅಮೆರಿಕಕ್ಕೆ ಭೇಟಿ ನೀಡಿದ್ದಾಗ, ಅಮೆರಿಕದ ಅಧಿಕಾರಿಗಳ ಜತೆ ಸಂದರ್ಶನಕ್ಕೆ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿತ್ತು. ಶ್ರೀಲಂಕಾ ಸೇನೆಯು ಎಡಬಿಡದೇ ಬಾಂಬ್ ದಾಳಿ ಮಾಡಿದ್ದರಿಂದ ಮತ್ತು ಎಲ್‌ಟಿಟಿಇ ವಿರುದ್ಧ ಹೋರಾಟದಲ್ಲಿ ನಾಗರಿಕ ಪ್ರದೇಶಗಳಲ್ಲಿ ಭಾರೀ ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸಿದ್ದರಿಂದ ನೂರಾರು ಜನರು ಸಾವು, ನೋವಿಗೆ ಗುರಿಯಾಗಿದ್ದಾರೆಂದು ಆರೋಪಿಸಲಾಗಿದೆ.

ಅಕ್ಟೋಬರ್ ಮಧ್ಯಾವಧಿಯಲ್ಲಿ ಅಮೆರಿಕ ವಿದೇಶಾಂಗ ಇಲಾಖೆಯು ಕಾಂಗ್ರೆಸ್‌ಗೆ ವರದಿ ಸಲ್ಲಿಸಿ, ಶ್ರೀಲಂಕಾ ಸೇನೆ ಮತ್ತು ಎಲ್‌ಟಿಟಿಇ ಬಂಡುಕೋರರಿಂದ ಗಂಭೀರ ಮಾನವ ಹಕ್ಕು ಉಲ್ಲಂಘನೆಗಳ ಬಗ್ಗೆ ವಿವರಿಸಿತ್ತು. ಆಂತರಿಕ ಯುದ್ಧದ ಅಂತಿಮ ಹಂತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಕುರಿತ ಅಮೆರಿಕ ಆರೋಪವನ್ನು ಕುರಿತ ತನಿಖೆಗೆ ಉನ್ನತ ಮಟ್ಟದ ಸ್ವತಂತ್ರ ಸಮಿತಿಯನ್ನು ನೇಮಿಸುವುದಾಗಿ ಶ್ರೀಲಂಕಾ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ