ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 11ರ ಪ್ರಾಯದಲ್ಲೇ ಮಗುವನ್ನು ಹೆತ್ತ 'ಕಿರಿ'ಯಮ್ಮ (London | Bulgeria | Cordhega | Youngage)
Feedback Print Bookmark and Share
 
ಬಲ್ಗೇರಿಯದ 11ರ ಪ್ರಾಯದ ಬಾಲಕಿ ಮಗುವಿಗೆ ಜನ್ಮ ನೀಡುವ ಮ‌ೂಲಕ ಅತ್ಯಂತ ಕಿರಿಯ ವಯಸ್ಸಿನ ತಾಯಿ ಎಂಬ ಪಟ್ಟ ಹೊತ್ತಿದ್ದಾಳೆ. ಆಕೆ ಮಗುವಿಗೆ ಜನ್ಮ ನೀಡಿದ ದಿನವೇ ಆಕೆಯ ಮದುವೆ ಕೂಡ ನಿಗದಿಯಾಗಿತ್ತು.

ಕೊರ್ದೆಜಾ ಎಂಬ ಈ ಬಾಲಕಿ ತನ್ನ ಗೆಳೆಯ ಜೆಲಿಯಾಜ್ಕೊನನ್ನು ಮದುವೆಯಾಗಲು ಸಿದ್ಧತೆ ನಡೆಸುತ್ತಿದ್ದಾಗಲೇ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡು ಮಧುಮಗಳ ಉಡುಪಿನಲ್ಲೇ ಆಸ್ಪತ್ರೆ ಸೇರಿ ಮಗುವನ್ನು ಹೆತ್ತಿದ್ದಾಳೆ.

ಮರುದಿನವೇ ಮತ್ತೆ ಗೆಳೆಯನ ಜತೆಯಲ್ಲಿ ಮದುವೆ ವಿಧಿವಿಧಾನ ಮುಗಿಸಿದ್ದಾಳೆ. ಆಟವಾಡುವ ವಯಸ್ಸಿನ ಬಾಲಕಿ ಮಗುವನ್ನು ಹೆತ್ತ ಬಳಿಕ ಈಗ ತನಗೆ ಆಟಿಕೆಗಳಾವುದೂ ಬೇಡ. ತನ್ನ ಮಗುವನ್ನೇ ಆಟಿಕೆಯಂತೆ ಕಾಣುವುದಾಗಿ ಬಾಲಕಿ ಹೇಳಿದ್ದಾಳೆ. ಜೆಲಿಯಾಜ್ಕೊ ಮನೆಯಲ್ಲಿ ಮಾತ್ರ ಈ ಮದುವೆಯಿಂದ ಅತೃಪ್ತಿಗೊಂಡಿದ್ದಾರೆಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ