ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪೊಲೀಸರ ಥಳಿತ: ಸಮುದ್ರದಲ್ಲಿ ಮುಳುಗಿ ಸತ್ತ ಯುವಕ (Indian ocean | Sri Lanka | TV camera | Drown)
Feedback Print Bookmark and Share
 
ಮಾನಸಿಕ ಅಸ್ವಸ್ಥ ಯುವಕನೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳಲು ಗುರುವಾರ ಸಮುದ್ರಕ್ಕೆ ಹಾರಿದರೂ ಅವನನ್ನು ಬಿಡದ ಪೊಲೀಸರು ಸಿಕ್ಕಾಪಟ್ಟೆ ಥಳಿಸಿದ್ದರಿಂದ ಅವನು ನೀರಿನಲ್ಲಿ ಮುಳುಗಿ ಸತ್ತಿರುವ ಹೃದಯವಿದ್ರಾವಕ ಘಟನೆ ವರದಿಯಾಗಿದೆ. ಸಮುದ್ರದಲ್ಲಿ ಯುವಕನನ್ನು ಪೊಲೀಸರು ಥಳಿಸುತ್ತಿರುವ ದೃಶ್ಯವನ್ನು ಜಗತ್ತಿನಾದ್ಯಂತ ಟಿವಿಗಳಲ್ಲಿ ನೇರ ಪ್ರಸಾರ ಮಾಡಲಾಗಿದೆ.

26 ವರ್ಷ ವಯಸ್ಸಿನ ಮೋಟರ್ ಮೆಕಾನಿಕ್ ಕೊಲಂಬಿಯದ ಬಾಂಬಲ್‌ಪಿಟಿಯ ಪ್ರದೇಶದ ಸಮುದ್ರತೀರದಲ್ಲಿ ಚಲಿಸುತ್ತಿದ್ದ ರೈಲುಗಳಿಗೆ ಕಲ್ಲುಗಳನ್ನು ಬೀಸುತ್ತಿದ್ದುದನ್ನು ಕಂಡ ಪೊಲೀಸರು ಅವನನ್ನು ಅಟ್ಟಿಸಿಕೊಂಡು ಹೋದರು. ಪೊಲೀಸರಿಂದ ತಪ್ಪಿಸಿಕೊಳ್ಳಲು ಯುವಕ ಸಮುದ್ರಕ್ಕೆ ಹಾರಿದರೂ ಬಿಡದ ಪೊಲೀಸರು ಅಲ್ಲೂ ಸಿಕ್ಕಾಪಟ್ಟೆ ಕೋಲುಗಳಿಂದ ಥಳಿಸಿದ್ದರಿಂದ ಅವನು ನೀರಿನಲ್ಲಿ ಮುಳುಗಿ ಸತ್ತಿದ್ದಾನೆಂದು ಪೊಲೀಸ್ ವಕ್ತಾರ ತಿಳಿಸಿದ್ದಾರೆ.

ಪೊಲೀಸ್ ಪೇದೆಯನ್ನು ಬಂಧಿಸಲಾಗಿದೆಯೆಂದು ವಕ್ತಾರ ತಿಳಿಸಿದ್ದಾರೆ. ಪೊಲೀಸರು ಯುವಕನನ್ನು ಅಟ್ಟಿಸಿಕೊಂಡು ಹೋಗುತ್ತಿರುವ ಮತ್ತು ಇನ್ನೊಬ್ಬ ಅಪರಿಚಿತ ವ್ಯಕ್ತಿ ಕೋಲುಗಳಿಂದ ಥಳಿಸಿದ್ದರಿಂದ ನೀರಿನಲ್ಲಿ ಕುಸಿದು ಬಿದ್ದು ಮುಳುಗಿಹೋದ ದೃಶ್ಯವನ್ನು ಟೀವಿ ವೀಕ್ಷಕರು ಭಯಗ್ರಸ್ಥರಾಗಿ ವೀಕ್ಷಿಸಿದರು.

ಮೆಕಾನಿಕ್‌ನಿಗೆ ಮಾನಸಿಕ ಅಸ್ವಸ್ಥೆಗಾಗಿ ಚಿಕಿತ್ಸೆ ನೀಡಲಾಗುತ್ತಿತ್ತೆಂದು ಅವನ ಬಂಧುಗಳು ತಿಳಿಸಿದ್ದಾರೆ. ಸಮುದ್ರದ ನೀರಿನಲ್ಲಿ ಮುಳುಗಿದ್ದ ಯುವಕನ ದೇಹವನ್ನು ಅಲೆಗಳು ಶುಕ್ರವಾರ ದಡಕ್ಕೆ ತಂದು ಎಸೆದಿತ್ತೆಂದು ತಿಳಿದುಬಂದಿದೆ.
ಸಂಬಂಧಿತ ಮಾಹಿತಿ ಹುಡುಕಿ