ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬೀಜಿಂಗ್ ಬರದ ಬೇಗೆಯಲ್ಲೂ ಸುರಿಯಿತು ಹಿಮ (Beijing | Clouds | Silver iodide | Seeding)
Feedback Print Bookmark and Share
 
ಭಾನುವಾರ ಬೆಳಿಗ್ಗೆ ಬೀಜಿಂಗ್ ಜನರು ಎದ್ದಾಗ ಚಳಿಗಾಲಕ್ಕೆ ಮುನ್ನವೇ ನಗರದಲ್ಲಿ ಹಿಮ ಆವರಿಸಿದ ಅಪೂರ್ವ ದೃಶ್ಯವನ್ನು ವೀಕ್ಷಿಸಿದರು. ದಿನದಾಂತ್ಯದಲ್ಲಿ ಮೋಡಗಳಿಗೆ ಸುಮಾರು 186 ಡೋಸ್ ಸಿಲ್ವರ್ ಐಯೋಡೈಡ್ ಸಿಂಪಡಿಸಿದ್ದರಿಂದ ಹಿಮಪಾತವಾಗಿರುವ ಸಂಗತಿ ಜನರಿಗೆ ಗೊತ್ತಾಯಿತು.

ಶನಿವಾರ ಬೆಳಿಗ್ಗೆ 8 ಗಂಟೆಯಿಂದಲೇ ಬೀಜಿಂಗ್ ಸುತ್ತಮುತ್ತ ತೀವ್ರ ಬರವನ್ನು ನೀಗಲು ಹವಾಮಾನ ಇಲಾಖೆಯು ಮೋಡಗಳ ಬಿತ್ತನೆ ಆರಂಭಿಸಿತು. ಬಿತ್ತನೆಯಿಂದ ಸುಮಾರು 16 ದಶಲಕ್ಷ ಟನ್ ಹಿಮವನ್ನು ಸೃಷ್ಟಿಸುವಲ್ಲಿ ಇಲಾಖೆ ಯಶಸ್ವಿಯಾಗಿದ್ದಾಗಿ ಹೇಳಿಕೊಂಡಿದೆ.ಬರದಿಂದ ಬೀಜಿಂಗ್ ಕಂಗೆಟ್ಟಿರುವುದರಿಂದ ಕೃತಕ ಹಿಮದ ಮಳೆ ಸುರಿಸುವ ಅವಕಾಶವನ್ನು ನಾವು ಕಳೆದುಕೊಳ್ಳುವುದಿಲ್ಲವೆಂದು ಜಾಂಗ್ ಕ್ಸಿಯಾಂಗ್ ತಿಳಿಸಿದ್ದಾರೆಂದು ಹೇಳಿಕೆ ತಿಳಿಸಿದೆ.

ಮೋಡ ಬಿತ್ತನೆಯಿಂದ ಮಧ್ಯಾಹ್ನದವರೆಗೆ ಹಿಮಪಾತ ಆರಂಭವಾಗಿ ಉಷ್ಣಾಂಶವನ್ನು ಮೈನಸ್ 2 ಸೆಲ್ಸಿಯಸ್‌ಗೆ ಕುಸಿಯುವಂತೆ ಮಾಡಿತು. ಉತ್ತರದಿಂದ ಬೀಸಿದ ಬಲವಾದ ಗಾಳಿಗಳಿಂದ ಶೀತಲ ವಾತಾವರಣ ಉಂಟುಮಾಡಿತು. ಮೋಡಗಳಿಗೆ ವಿಶೇಷ ರಾಸಾಯನಿಕಗಳನ್ನು ಬಿತ್ತಿ ಹವಾಮಾನ ತಜ್ಞರು ಮಳೆ ತರಿಸುತ್ತಿದ್ದರೂ, ಈ ವರ್ಷ ಉತ್ತರಭಾಗದಲ್ಲಿ ಬರದ ಬೇಗೆ ಹರಡುವಿಕೆ ತಡೆಯಲು ಸಾಧ್ಯವಾಗಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ