ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಫ್ಘಾನ್‌ನಲ್ಲಿ ಭ್ರಷ್ಟಾಚಾರ ತಡೆಗೆ ಒಬಾಮಾ ಕರೆ (Obama | Karzai | Corruption | Afghan)
Feedback Print Bookmark and Share
 
ಭ್ರಷ್ಟಾಚಾರದ ವಿರುದ್ಧ ದಾಳಿ ಮತ್ತು ಸುಧಾರಣೆಗಳನ್ನು ಆರಂಭಿಸುವ ಮ‌ೂಲಕ ನಿಮ್ಮ ರಾಷ್ಟ್ರಕ್ಕೆ ಹೊಸ ಅಧ್ಯಾಯ ತೆರೆಯಬೇಕೆಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಆಫ್ಘಾನ್ ಅಧ್ಯಕ್ಷ ಹಮೀದ್ ಕರ್ಜೈ ಅವರಿಗೆ ಕರೆ ನೀಡಿದ್ದಾರೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ ಕರ್ಜೈ ಅವರನ್ನು ಅಭಿನಂದಿಸಲು ಕರೆ ಮಾಡಿದ ಒಬಾಮಾ, ಸರ್ಕಾರದಲ್ಲಿ ಸುಧಾರಣೆ, ಭಯೋತ್ಪಾದನೆ ವಿರುದ್ದ ಹೋರಾಟ ಮತ್ತು ಆಫ್ಘಾನ್ ಭದ್ರತಾ ಪಡೆಗಳಿಗೆ ತರಬೇತಿಯಲ್ಲಿ ವೇಗವರ್ಧನೆಗೆ ಒತ್ತಾಯಿಸಿದರು.ಮಾತುಗಳಲ್ಲಿ ಮಾತ್ರ ಪುರಾವೆ ಒದಗಿಸಬಾರದು, ಕೃತಿಗಳಲ್ಲಿರಬೇಕು ಎಂದು ಸ್ವೀಡನ್ ಪ್ರಧಾನಮಂತ್ರಿ ಫ್ರೆಡರಿಕ್ ರೈನ್‌ಫೆಲ್ಡ್ ಜತೆ ಭೇಟಿಯಲ್ಲಿ ಹೇಳಿದರು.

ಕರ್ಜೈ ವಿರೋಧಿ ಮಾಜಿ ವಿದೇಶಾಂಗ ಸಚಿವ ಅಬ್ದುಲ್ಲಾ ಅಬ್ದುಲ್ಲಾ ಈ ವಾರಾಂತ್ಯದ ಎರಡನೇ ಹಂತದ ಮರುಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದ ಬಳಿಕ ಕರ್ಜೈ ಅವರನ್ನು ವಿಜೇತರೆಂದು ಘೋಷಿಲಾಗಿದೆ. ಕರ್ಜೈ ಅವರ ಮರುಚುನಾವಣೆಯ ಮೊದಲನೇ ಹಂತದ ಮತದಾನದಲ್ಲಿ ಅಕ್ರಮ ನಡೆದ ಕೂಗು ಕೇಳಿಬಂದಿತ್ತು.

ಕರ್ಜೈ ಆರಂಭದಲ್ಲೇ ವಿಜಯಕ್ಕೆ ಬೇಕಾಗಿದ್ದ ಶೇ.50 ಮತಗಳನ್ನು ಗಳಿಸಿದ್ದರು. ಬಳಿಕ ಅಕ್ರಮ ಮತದಾನ ಗುರುತಿಸಿದ ಬಳಿಕ ಆ ಹೊಸ್ತಿಲು ದಾಟಲು ವಿಫಲರಾಗಿ ಅಮೆರಿಕ ಒತ್ತಡದ ಮೇಲೆ ರನ್ ಆಫ್ ಅಥವಾ ಮರುಚುನಾವಣೆಗೆ ಒಪ್ಪಿದ್ದರು.
ಸಂಬಂಧಿತ ಮಾಹಿತಿ ಹುಡುಕಿ