ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪತ್ನಿಯನ್ನು ನೈಜ ರೂಪಕ್ಕೆ ಕೆತ್ತಿದ ಪ್ಲಾಸ್ಟಿಕ್ ಸರ್ಜನ್ (Plastic surgeon | Vossough | Marry | Botox)
Feedback Print Bookmark and Share
 
ತಾನು ವಿವಾಹಕ್ಕೆ ಆಯ್ಕೆ ಮಾಡಿದ ಮಹಿಳೆಯ ಎದೆ, ತೊಡೆಗಳು, ಕಣ್ಣುಗಳು ಮತ್ತು ಮುಖಕ್ಕೆ 8 ಶಸ್ತ್ರಚಿಕಿತ್ಸೆ ಮಾಡುವ ಮ‌ೂಲಕ ಆಕೆಗೊಂದು ನೈಜ ರೂಪಕ್ಕೆ ಕೆತ್ತಿದ್ದಾಗಿ ಜರ್ಮನಿಯ ಪ್ಲಾಸ್ಟಿಕ್ ಸರ್ಜನ್ ರೆಜಾ ವಸಾಗ್ ಬಹಿರಂಗಮಾಡಿದ್ದಾರೆ. ಪತ್ನಿಯ ಸೌಂದರ್ಯದ ಬಗ್ಗೆ ಗೀಳು ಹಿಡಿದಿದ್ದ ರೆಜಾ ವಸಾಗ್ ತಮ್ಮ ಆದರ್ಶ ಪ್ರೇಮಿಯಾಗುವ ಸಾಮರ್ಥ್ಯವನ್ನು ಹೊಂದಿರುವಳೆಂದು ಗುರುತಿಸಿದ ಅನಾಕರ್ಷಕ ಮಹಿಳೆ ಜತೆ ವೈವಾಹಿಕ ಬದುಕಿಗೆ ಕಾಲಿರಿಸಿದರು.

ಕೇನ್ ಎಂಬ ತಮ್ಮ ಪತ್ನಿಯ ದೇಹಕ್ಕೆ ಸುಮಾರು 600 ಗ್ರಾಂ ಸಿಲಿಕೋನ್ ಪಂಪ್ ಮಾಡಲು ಪ್ಲ್ಯಾಸ್ಟಿಕ್ ಸರ್ಜನ್ ಐದು ವರ್ಷಗಳನ್ನು ಕಳೆದು, ಪತ್ನಿಯ ಎದೆಯ ಗಾತ್ರ, ತುಟಿಗಳು, ಕಣ್ಣಿನ ಹುಬ್ಬು, ಹಣೆಯನ್ನು ವರ್ಧಿಸಿದರು.33 ವರ್ಷ ವಯಸ್ಸಿನ ಮಾಜಿ ಪರಿಚಾರಿಕೆ, ಪ್ರಸಕ್ತ ರೂಪದರ್ಶಿ ತನ್ನ ತೊಡೆಗಳು, ಹೊಟ್ಟೆಯನ್ನು ಸುಸ್ಥಿತಿಗೆ ತರಲು ಅನೇಕ ಬೋಟೋಕ್ಸ್ ಚುಚ್ಚುಮದ್ದುಗಳ ಜತೆ ಶಸ್ತ್ರಚಿಕಿತ್ಸೆಗೆ ಗುರಿಯಾದಳು.

ತಾವು ಮೊದಲಿಗೆ ಕೇನಿಯನ್ನು ಭೇಟಿ ಮಾಡಿದಾಗ ದೈಹಿಕ ನ್ಯೂನತೆಗಳಿಂದ ಕೂಡಿದ್ದಳು. ಆದರೆ ಈಗ ಒಂದು ಆಕರ್ಷಕ ರೂಪವನ್ನು ಕಡೆದಿದ್ದಾಗಿ ವೆಸಾಗ್ ಹೇಳಿದ್ದಾರೆ. ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆ ಬಳಿಕ ಆಕೆಯ ಎಲ್ಲ ಲಕ್ಷಣಗಳನ್ನು ವರ್ಧಿಸಿದ ವೆಸಾಗ್ ಬಳಿಕವೇ ತನ್ನ ಪತ್ನಿಯ ಜತೆ ಅನುರಕ್ತರಾದರೆಂದು ವರದಿಯಾಗಿದೆ. ಕೇನಿ 18,000 ಡಾಲರ್ ವೆಚ್ಚವಾದ ಕಾಸ್ಮೆಟಿಕ್ ಸರ್ಜರಿಯಿಂದ ಕಡೆದ ಹೊಸ ರೂಪದಿಂದ ರೋಮಾಂಚಿತಳಾಗಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ