ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಗ್ನಿ ಆಕಸ್ಮಿಕ: 8 ಭಾರತೀಯರು ಪಾರು (Indians | Internet | Warehouse | Flat)
Feedback Print Bookmark and Share
 
ತಮ್ಮ ಫ್ಲ್ಯಾಟ್ ಅಡಿಯಲ್ಲಿದ್ದ ಇಂಟರ್‌ನೆಟ್ ಕೇಂದ್ರವು ನಿಗೂಢ ರೀತಿಯಲ್ಲಿ ಸ್ಫೋಟಿಸಿದ್ದರಿಂದ 8 ಮಂದಿ ಭಾರತೀಯರು ಅದೃಷ್ಟವಶಾತ್ ಸ್ವಲ್ಪದರಲ್ಲಿ ಪಾರಾಗಿದ್ದಾರೆ. ಸಮೀಪದ ಉಗ್ರಾಣದಲ್ಲಿ ಇದೇ ರೀತಿಯ ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಈ ಸ್ಫೋಟ ಸಂಭವಿಸಿದೆ.

ಬ್ರನ್ಸ್‌ವಿಕ್ ಸಿಡ್ನಿ ರಸ್ತೆಯ ಇಂಟರ್‌ನೆಟ್ ಕೆಫೆಯ ಮೇಲಿರುವ ಫ್ಲ್ಯಾಟ್‌ನ್ನು ಹಂಚಿಕೊಂಡಿದ್ದ ನಿವಾಸಿಗಳು ಸ್ಥಳೀಯ ಕಾಲಮಾನ ರಾತ್ರಿ 1.30ಕ್ಕೆ ಭಾರೀ ಶಬ್ದ ಅಪ್ಪಳಿಸಿದ್ದರಿಂದ ಎಚ್ಚರಗೊಂಡರು. ಇಂಟರ್‌ನೆಟ್ ಕೆಫೆಯ ಮುಂಭಾಗದ ಕಿಟಕಿಗಳು ಹಾರಿಹೋಗಿ, ಎರಡು ಮಹಡಿಗಳ ಕಟ್ಟಡಕ್ಕೆ ಬೆಂಕಿ ಹತ್ತಿಕೊಂಡ ಬಳಿಕ ನಿವಾಸಿಗಳು ಸ್ವಲ್ಪದರಲ್ಲಿ ಪಾರಾದರು.

ಬೆಂಕಿಯಿಂದ ಇಂಟರ್‌ನೆಟ್ ಕೇಂದ್ರ ಮತ್ತು ನೆಲಮಹಡಿಯ ನಿವಾಸವು ಸುಟ್ಟುಹೋಗಿದ್ದು, ನೆರೆಯ ಕಟ್ಟಡಗಳಿಗೆ ಕೂಡ ಗಮನಾರ್ಹ ಹಾನಿಯಾಗಿದೆ. ಬೆಂಕಿಯ ಜ್ವಾಲೆಯನ್ನು ನಿಯಂತ್ರಿಸಲು ಸುಮಾರು 25 ಅಗ್ನಿಶಾಮಕ ವಾಹನಗಳು ಒಂದು ಗಂಟೆ ಕಾಲ ಹೆಣಗಾಡಿದವು.
ಸಂಬಂಧಿತ ಮಾಹಿತಿ ಹುಡುಕಿ