ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವೇತನ, ಪಿಂಚಣಿಗೆ ಬಂದವರು ದಾಳಿಗೆ ಬಲಿ (Rawalpindi | Suicide | Salaries | Pension)
Feedback Print Bookmark and Share
 
ರಾವಲ್ಪಿಂಡಿಯಲ್ಲಿ ಸೋಮವಾರ ಸಂಭವಿಸಿದ ಆತ್ಮಾಹುತಿ ದಾಳಿಯಲ್ಲಿ ಅನೇಕ ಮಂದಿ ಸೇವಾನಿರತ ಮತ್ತು ನಿವೃತ್ತ ಮಿಲಿಟರಿ ಅಧಿಕಾರಿಗಳು ಹತರಾಗಿದ್ದಾರೆ. ತಮ್ಮ ವೇತನ ಮತ್ತು ಪಿಂಚಣಿಗಳನ್ನು ಪಡೆಯಲು ಅವರು ರಾಷ್ಟ್ರೀಯ ಬ್ಯಾಂಕ್‌ಗೆ ಬಂದಿದ್ದಾಗ ದುರದೃಷ್ಟವಶಾತ್ ಬಾಂಬ್ ಸ್ಪೋಟಕ್ಕೆ ಬಲಿಪಶುಗಳಾದರು.

ಸುಮಾರು 22 ಜನರು ಆತ್ಮಾಹುತಿ ದಾಳಿಗೆ ಬಲಿಯಾಗಿದ್ದಾರೆಂದು ರಾವಲ್ಪಿಂಡಿ ಪೊಲೀಸ್ ಮುಖ್ಯಸ್ಥ ತಿಳಿಸಿದ್ದು, ಅನೇಕ ಟಿವಿ ಕೇಂದ್ರಗಳು 34 ಜನರು ಸತ್ತಿದ್ದಾರೆಂದು ಪ್ರಸಾರ ಮಾಡಿರುವುದಾಗಿ ತಿಳಿಸಿದರು.

ಮಿಲಿಟರಿ ಸಿಬ್ಬಂದಿ ಪ್ರದೇಶವನ್ನು ಸುತ್ತುವರಿದು, ಬ್ಯಾಂಕಿನ ಎದುರುಗಡೆ ರಸ್ತೆಯಲ್ಲಿರುವ ವಾಹನಗಳ ಮಾರ್ಗ ಬದಲಾಯಿಸಿದ್ದಾರೆ. ರಾಷ್ಟ್ರಾದ್ಯಂತ ಹಿಂಸಾಚಾರವನ್ನು ಉಲ್ಲೇಖಿಸಿದ ವಿಶ್ವಸಂಸ್ಥೆ ವಾಯವ್ಯ ಪಾಕಿಸ್ತಾನದಿಂದ ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳುವುದಾಗಿ ತಿಳಿಸಿದೆ.ಸ್ಫೋಟಕ್ಕೆ ಯಾರೂ ಹೊಣೆ ಹೊತ್ತುಕೊಂಡಿಲ್ಲ.

ಆದರೆ ಅಕ್ಟೋಬರ್‌ನಿಂದ ಸರಣಿ ದಾಳಿಗಳನ್ನು ನಡೆಸಿದ ತಾಲಿಬಾನ್ ಮೇಲೆ ಸಂಶಯ ಆವರಿಸಿದ್ದು, ಇದಕ್ಕೆ ಮುಂಚೆ ದಕ್ಷಿಣ ವಜಿರಿಸ್ತಾನದಲ್ಲಿ ಸೇನಾ ಕಾರ್ಯಾಚರಣೆಯಲ್ಲಿ 124 ಜನರು ಬಲಿಯಾಗಿದ್ದಾರೆಂದು ಪಾಕಿಸ್ತಾನ ಸೇನೆ ಹೇಳಿಕೆ ನೀಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ