ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಎಚ್‌1ಎನ್‌1 ಲಸಿಕೆ ಸಿದ್ಧ, ಅಮೆರಿಕದ ತಾರತಮ್ಯ (Swine flu | Pregnant | Trial | Vaccine)
Feedback Print Bookmark and Share
 
ಸಾವಿರಾರು ಜನರನ್ನು ಬಲಿತೆಗೆದುಕೊಂಡ ಎಚ್‌1ಎನ್‌1 ಕಾಯಿಲೆಗೆ ಕೊನೆಗೂ ಲಸಿಕೆ ಸಿದ್ಧವಾಗಿದ್ದು, ಒಂದು ಡೋಸ್ ಲಸಿಕೆ ಗರ್ಭಿಣಿ ಮಹಿಳೆಯನ್ನು ರಕ್ಷಿಸುತ್ತದೆ. 10 ವರ್ಷ ಪ್ರಾಯಕ್ಕಿಂತ ಕೆಳಗಿನ ಮಕ್ಕಳಿಗೆ ಎರಡು ಡೋಸ್ ಲಸಿಕೆ ನೀಡುವ ಅಗತ್ಯವಿದೆ ಎಂದು ಅಮೆರಿಕ ಅಧಿಕಾರಿಗಳು ಸೋಮವಾರ ಕ್ಲಿನಿಕಲ್ ಪ್ರಯೋಗಗಳ ಮತ್ತಷ್ಟು ಫಲಿತಾಂಶಗಳನ್ನು ಪ್ರಕಟಿಸುತ್ತಾ ಹೇಳಿದ್ದಾರೆ.

ಸುಮಾರು ಲಕ್ಷಾಂತರ ಜನ ಅಮೆರಿಕನ್ನರು ಹಂದಿಜ್ವರದ ಸೋಂಕು ಹರಡದಂತೆ ಲಸಿಕೆ ಹಾಕಿಸಿಕೊಳ್ಳುತ್ತಿದ್ದು, ಯಾವುದಾದರೂ ಅಪರೂಪದ ಅಥವಾ ನಿರೀಕ್ಷಿಸಿರದ ಅಡ್ಡಪರಿಣಾಮಗಳನ್ನು ಗಮನಿಸಲು ತಜ್ಞರ ಸಮಿತಿಯ ನೇಮಕ ಪ್ರಕಟಿಸಲಾಗಿದೆ. ಇದುವರೆಗೆ ಸುಮಾರು 30 ದಶಲಕ್ಷ ಡೋಸ್ ಲಸಿಕೆಗಳು ಲಭ್ಯವಿದೆ.ಎಲ್ಲ ಕ್ಲಿನಿಕಲ್ ಪ್ರಯೋಗಗಳನ್ನು ಮುಗಿಸುವ ಮುಂಚೆ ಲಸಿಕೆಯನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದೆ. ಏಕೆಂದರೆ ಆಗಸ್ಟ್ ಕೊನೆಯಲ್ಲಿ ಹಂದಿ ಜ್ವರದ ವೈರಸ್‌ನ ಎರಡನೇ ಅಲೆಯ ದಾಳಿ ಆರಂಭಿಸಿದೆಯೆಂದು ವರದಿಯಾಗಿದೆ.

ಪ್ರಯೋಗಗಳ ಫಲಿತಾಂಶ ಈಗಾಗಲೇ ಲಸಿಕೆ ಹಾಕಿಸಿಕೊಂಡ ಅನೇಕ ಗರ್ಭಿಣಿ ಮಹಿಳೆಯರಿಗೆ ಅಥವಾ ಲಸಿಕೆ ಹಾಕಿಸಿಕೊಳ್ಳಲು ಹೆದರುವ ಮಹಿಳೆಯರಿಗೆ ಪುನರ್‌ಭರವಸೆ ನೀಡಲಿದೆ. 50 ಆರೋಗ್ಯಕರ ಗರ್ಭಿಣಿ ಮಹಿಳೆಯರು ಲಸಿಕೆಯ ಪ್ರಯೋಗದಿಂದ ಯಾವುದೇ ಅಡ್ಡಪರಿಣಾಮ ಅನುಭವಿಸಿಲ್ಲ.

ಒಂದು 15 ಮೈಕ್ರೋಗ್ರಾಂ ಡೋಸ್ ಪ್ರತಿವಿಷವಸ್ತುವಿನ ರಕ್ಷಣಾತ್ಮಕ ಮಟ್ಟವನ್ನು ಮುಟ್ಟಿದೆಯೆಂದು ಡಾ. ಆಂಥೋನಿ ಎಸ್.ಫಾಸಿ ತಿಳಿಸಿದ್ದಾರೆ. ಜಗತ್ತಿನ ಎಲ್ಲ ಮಕ್ಕಳಿಗೆ ಒಂದು ಡೋಸ್ ಲಸಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದೆ. ಆದರೆ ಅಮೆರಿಕವು ಆ ಸಲಹೆಯನ್ನು ಕಡೆಗಣಿಸಿ, ಅಮೆರಿಕದ ಮಕ್ಕಳನ್ನು ಮೊದಲಿಗೆ ಪೂರ್ಣವಾಗಿ ರಕ್ಷಿಸುವ ಖಾತರಿಗೆ ಪ್ರಯತ್ನಿಸುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ