ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಾಲ್ಡೀವ್ಸ್ ಜಲಗರ್ಭದ ಸಭೆ ಬಳಿಕ ನೇಪಾಳ ಎವರೆಸ್ಟ್ ಸಭೆ (Nepal | Everest | Cabinet | Warming)
Feedback Print Bookmark and Share
 
ಜಾಗತಿಕ ತಾಪಮಾನದ ಬೆದರಿಕೆ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯದ ಗಮನಸೆಳೆಯಲು ನೇಪಾಳ ಸಚಿವ ಸಂಪುಟ ಸಭೆಯು ಮೌಂಟ್ ಎವರೆಸ್ಟ್ ಮೇಲೆ ನಡೆಯಲಿದೆಯೆಂದು ಸಚಿವರು ತಿಳಿಸಿದ್ದಾರೆ. ಡೆನ್ಮಾರ್ಕ್ ಕೊಫೆನ್‌ಹ್ಯಾಗನ್‌ನಲ್ಲಿ ಅಂತಾರಾಷ್ಟ್ರೀಯ ಹವಾಮಾನ ಬದಲಾವಣೆ ಸಮಾವೇಶಕ್ಕೆ ಮುನ್ನ ಈ ಸಭೆ ನಡೆಸಲು ನೇಪಾಳ ನಿರ್ಧರಿಸಿದೆ.

ಮಾಲ್ಡೀವ್ಸ್ ಸರ್ಕಾರ ಸಮುದ್ರದ ಅಡಿಯಲ್ಲಿ ಸಚಿವ ಸಂಪುಟದ ಸಭೆಯನ್ನು ಇತ್ತೀಚೆಗೆ ನಡೆಸಿದ ಬೆನ್ನಲ್ಲೇ ನೇಪಾಳವೂ ಎವರೆಸ್ಟ್ ಪರ್ವತದ ಮೇಲೆ ಸಂಪುಟದ ಸಭೆ ಸೇರಲು ನಿರ್ಧರಿಸಿದೆ. ಕೊಫೆನ್‌ಹ್ಯಾಗನ್ ಸಭೆಗೆ ಮುನ್ನ, ಜಾಗತಿಕ ತಾಪಮಾನದಿಂದ ಹಿಮಾಲಯವನ್ನು ಉಳಿಸುವಂತೆ ಜಗತ್ತಿನ ಗಮನಸೆಳೆಯಲು ಮಹತ್ವದ ಸಭೆ ನಡೆಸುವುದಕ್ಕಾಗಿ 22 ಪಕ್ಷಗಳ ಸಮ್ಮಿಶ್ರ ಕೂಟದ ಇಡೀ ಕ್ಯಾಬಿನೆಟ್ 17,585 ಅಡಿ ಎತ್ತರದ ಎವರೆಸ್ಟ್ ಬೇಸ್ ಕ್ಯಾಂಪ್‌ನಲ್ಲಿ ಬೀಡು ಬಿಡಲಿದೆಯೆಂದು ಅರಣ್ಯ ಸಚಿವ ದೀಪಕ್ ಬೊಹೊರಾ ತಿಳಿಸಿದ್ದಾರೆ.

ಹಿಮಾಲಯ ಮತ್ತು ಅದರ ಸಂಪನ್ಮೂಲಗಳ ಮೇಲೆ ಅವಲಂಬಿತವಾದ ಜನರ ಮೇಲೆ ಹವಾಮಾನ ಬದಲಾವಣೆಯ ಪರಿಣಾಮದ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯದ ಗಮನಸೆಳೆಯುವುದು ಸಚಿವಸಂಪುಟದ ಗುರಿಯಾಗಿದೆಯೆಂದು ಸಚಿವರು ಹೇಳಿದ್ದಾರೆ. ಮಾಲ್ಡೀವ್ಸ್ ಜಲಗರ್ಭದ ಸಂಪುಟದ ಸಭೆ ನಡೆಸುವುದಕ್ಕೆ ಮುಂಚಿತವಾಗಿ ಈ ಪ್ರಸ್ತಾವನೆ ಮಾಡಲಾಗಿತ್ತೆಂದು ಬೊಹೋರಾ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ