ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಡಿಫೆನ್ಸ್ ಕಾಲೇಜಿನ ಮೇಲೆ ದಾಳಿಗೆ ಸಂಚು ಬಯಲು (Headley | Rana | Defence College | FBI)
Feedback Print Bookmark and Share
 
ಲಷ್ಕರೆ ತೊಯ್ಬಾ ಉಗ್ರಗಾಮಿ ಸಂಘಟನೆಯು ಡೆನ್ಮಾರ್ಕ್ ಸುದ್ದಿಪತ್ರಿಕೆ ಮತ್ತು ಭಾರತ ರಾಷ್ಟ್ರೀಯ ರಕ್ಷಣಾ ಕಾಲೇಜಿನ ಮೇಲೆ ದಾಳಿಗೆ ಯೋಜಿಸಿದ್ದು, ಎಫ್‌ಬಿಐ ಕಳೆದ ತಿಂಗಳು ಬಂಧಿಸಿದ ಡೇವಿಡ್ ಕೋಲ್ಮನ್ ಹೆಡ್ಲೆ ಮತ್ತು ತಹಾವುರ್ ಹುಸೇನ್ ರಾನಾ ಅವರು ದಾಳಿಗೆ ಸ್ಕೆಚ್ ರೂಪಿಸಿದ ಸಂಗತಿಯು ಬಯಲಾಗಿದೆ.

ಚಿಕಾಗೊ ಕೋರ್ಟ್ ಮಂಗಳವಾರ ರಾನಾ ಜಾಮೀನು ಅರ್ಜಿಯನ್ನು ನಿರಾಕರಿಸಿದ್ದು, ರಾನಾ ಸಮುದಾಯಕ್ಕೆ ಅಪಾಯಕಾರಿಯಾಗಿದ್ದು, ಅವನು ಬಿಡುಗಡೆಯಾದರೆ ದೇಶವನ್ನು ಬಿಡಬೇಕಾಗುತ್ತದೆಂದು ಅಮೆರಿಕದ ಅಟಾರ್ನಿಗಳು ಹೇಳಿದ್ದಾರೆ.

ರಾನಾ ತಪ್ಪಿತಸ್ಥರೆಂದು ಸಾಬೀತಾದರೆ 30 ವರ್ಷಗಳ ಗರಿಷ್ಠ ಶಿಕ್ಷೆಯನ್ನು ಎದುರಿಸಲಿದ್ದಾನೆ.ಡೆನ್ಮಾರ್ಕ್ ಮತ್ತು ಭಾರತದಲ್ಲಿ ದಾಳಿಗಳಿಗೆ ಯೋಜಿಸಿದ ಆರೋಪಗಳ ಮೇಲೆ ಚಿಕಾಗೊ ನಿವಾಸಿ ರಾನಾ ಮತ್ತು ಅವನ ಶಾಲೆಯ ಸಹಪಾಠಿ ಹೆಡ್ಲಿಯನ್ನು ಎಫ್‌ಬಿಐ ಬಂಧಿಸಿ ವಿಚಾರಣೆಗೆ ಒಳಪಡಿಸಿದೆ. ಉಭಯತ್ರರ ದೂರವಾಣಿ ಸಂಭಾಷಣೆಯನ್ನು ಎಫ್‌ಬಿಐ ದಾಖಲಿಸಿದ್ದು, ದೆಹಲಿಯ ನ್ಯಾಷನಲ್ ಡಿಫೆನ್ಸ್ ಕಾಲೇಜಿನ ಮೇಲೆ ದಾಳಿಗೆ ಗುರಿಯಿರಿಸಿದ್ದ ವಿಷಯ ಬಯಲಾಗಿದೆ.

ಇದೇ ಸಂಭಾಷಣೆಯಲ್ಲಿ ಹೆಡ್ಲಿ ಮತ್ತು ರಾನಾ ಡೆನ್ಮಾರ್ಕ್ ಮತ್ತಿತರ ಇತರೆ ಗುರಿಗಳನ್ನು ಕೂಡ ಚರ್ಚಿಸಿದರು. ರಾನಾ ಈ ಸಂಭಾಷಣೆಯಲ್ಲಿ ಇಂಗ್ಲೀಷಿನ ಟಾರ್ಗೆಟ್ ಎಂಬ ಪದ ಬಳಸಿದ್ದಾನೆಂದು ಎಫ್‌ಬಿಐ ಕೋರ್ಟ್‌ಗೆ ತಿಳಿಸಿದೆ.

ಸೆಪ್ಟೆಂಬರ್ 7ರ ಸಂಭಾಷಣೆಯಲ್ಲಿ ವಿವಿಧ ಗುರಿಗಳ ಮೇಲೆ ದಾಳಿ ಮಾಡುವ ಬಗ್ಗೆ ರಾನಾ ಮತ್ತು ಹೆಡ್ಲೆ ಚರ್ಚಿಸಿದರೆಂದು ಎಫ್‌ಬಿಐ ಹೇಳಿದೆ. ಹೆಡ್ಲೆ ಡೆನ್ಮಾರ್ಕ್ ಸೇರಿ ನಾಲ್ಕು ಗುರಿಗಳನ್ನು ಪಟ್ಟಿ ಮಾಡಿದರು. ಇಬ್ಬರು ಚಿಕಾಗೊ ನಿವಾಸಿಗಳು ಬಳಿಕ ಐದನೇ ಗುರಿಯನ್ನು ಕುರಿತು ಚರ್ಚಿಸಿದರು.
ಸಂಬಂಧಿತ ಮಾಹಿತಿ ಹುಡುಕಿ