ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತದ ಶಸ್ತ್ರ ಪತ್ತೆ, ಇನ್ನೂ ಸಾಕ್ಷ್ಯ ನೀಡಿಲ್ಲವೆಂದ ಪಾಕ್ (Islamabad | Bombs | Taliban | Pakistan)
Feedback Print Bookmark and Share
 
ಪಾಕಿಸ್ತಾನ ಸೇನೆ ತಾಲಿಬಾನ್ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ದಕ್ಷಿಣ ವಜಿರಿಸ್ತಾನದಲ್ಲಿ ಭಾರತದ ಶಸ್ತ್ರಗಳು, ಬಾಂಬ್‌ಗಳು ಮತ್ತು ಔಷಧಿಗಳು ಪತ್ತೆಯಾಗಿರುವ ಬಗ್ಗೆ ಸಾಕ್ಷ್ಯಾಧಾರವನ್ನು ಭಾರತಕ್ಕೆ ಇನ್ನೂ ಹಸ್ತಾಂತರಿಸಲಾಗಿಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ವಕ್ತಾರ ತಿಳಿಸಿದ್ದಾರೆ.

ದಕ್ಷಿಣ ವಜಿರಿಸ್ತಾನದಲ್ಲಿ ಉಗ್ರಗಾಮಿಗಳಿಂದ ಬಂಡಾಯಕ್ಕೆ, ದಂಗೆಗೆ ಭಾರತ ಉತ್ತೇಜಿಸುತ್ತಿರುವ ಬಗ್ಗೆ ಪುರಾವೆಗಳು ಸಿಕ್ಕಿವೆಯೆಂದು ವಿದೇಶಾಂಗ ಕಚೇರಿ ವಕ್ತಾರ ಅಬ್ದುಲ್ ಬಸಿತ್ ಖಾನ್ ತಿಳಿಸಿದ್ದಾರೆ. ಭಾರತದ ಶಸ್ತ್ರಗಳು, ಬಾಂಬ್‌ಗಳು ಮತ್ತು ಔಷಧಿಗಳು ಮುಂತಾದ ಸಾಕ್ಷ್ಯಾಧಾರಗಳು ಭಾರತದ ವಿರುದ್ಧ ಸಿಕ್ಕಿದೆಯೆಂದು ಜಿಯೊ ನ್ಯೂಸ್‌ಗೆ ಅವರು ತಿಳಿಸಿದ್ದಾರೆ. ಆ ಸಾಕ್ಷ್ಯಾಧಾರಗಳನ್ನು ಕುರಿತು ತನಿಖೆ ನಡೆಸಲಾಗುತ್ತಿದೆಯೆಂದು ಅವರು ಹೇಳಿದ್ದಾರೆ.

ನೆರೆಯ ರಾಷ್ಟ್ರದಲ್ಲಿ ಭಾರತ ಉಗ್ರಗಾಮಿ ಚಟುವಟಿಕೆಗೆ ಕುಮ್ಮಕ್ಕು ನೀಡುತ್ತಿದೆಯೆಂಬ ಇಸ್ಲಾಮಾಬಾದ್ ಆರೋಪವನ್ನು ನವದೆಹಲಿ ಮಂಗಳವಾರ ನಿರಾಕರಿಸಿದ್ದು, ಪಾಕಿಸ್ತಾನದ ಆಂತರಿಕ ಬೆಳವಣಿಗೆಗಳಲ್ಲಿ ಮ‌ೂಗು ತೂರಿಸುತ್ತಿರುವುದನ್ನು ಅಲ್ಲಗಳೆದಿದೆ. ಬೆಲೂಚಿಸ್ತಾನ ಅಥವಾ ಪಾಕಿಸ್ತಾನದ ಬೆಳವಣಿಗೆಗಳಿಗೂ ನಮಗೂ ಸಂಬಂಧವಿಲ್ಲ. ಇವೆಲ್ಲ ಪಾಕ್ ಸ್ವಯಂಕೃತ ಅಪರಾಧ ಎಂದು ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ