ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬದುಕಿದ್ದರೂ 'ಸತ್ತ' ಚೀನಾ ಗ್ರಾಮಸ್ಥರಿಂದ ಪ್ರತಿಭಟನೆ (Beijing | Death | Taxes | Village lists)
Feedback Print Bookmark and Share
 
ಗ್ರಾಮಗಳ ಪಟ್ಟಿಯಲ್ಲಿ ಚೀನಾದ ಗ್ರಾಮಸ್ಥರ ಹೆಸರೇ ನಾಪತ್ತೆಯಾಗಿದ್ದು, ಅವರು ಜೀವಂತವಾಗಿದ್ದರೂ ಸತ್ತಿದ್ದಾರೆಂದು ದಾಖಲಿಸಲಾಗಿದೆ. ಈ ಕುರಿತು ಚೀನಾದ ನೂರಾರು ಗ್ರಾಮಸ್ಥರು ತಮ್ಮ ಸಾವಿನ ವರದಿಗಳ ಬಗ್ಗೆ ಪ್ರತಿಭಟನೆಗೆ ಇಳಿದಿದ್ದಾರೆ.ಗ್ರಾಮಗಳು ಸರ್ಕಾರದ ಉನ್ನತ ಮಟ್ಟಕ್ಕೆ ಪಾವತಿ ಮಾಡುವ ತೆರಿಗೆಗಳು ಮತ್ತು ಕೇಂದ್ರ ಸರ್ಕಾರದ ಸಾಮಾಜಿಕ ಅಭಿವೃದ್ಧಿ ಪಾವತಿಗಳು ಮನೆಗಳ ಸಂಖ್ಯೆಯ ಆಧಾರದ ಮೇಲಿರುತ್ತದೆ.

ಬದುಕಿದವರು ಸತ್ತಿದ್ದಾರೆಂದು ಸುಳ್ಳು ಸಾವುಗಳನ್ನು ದಾಖಲಿಸುವ ಮ‌ೂಲಕ ಸ್ಥಳೀಯ ಅಧಿಕಾರಿಗಳು ಈ ಪಾವತಿಗಳಿಗೆ ತಡೆ ವಿಧಿಸುತ್ತಿದ್ದಾರೆ. ಹೊಸದಾಗಿ ರಚಿತವಾದ ವೈದ್ಯಕೀಯ ವಿಮೆ ಮತ್ತು ಪಿಂಚಣಿ ಯೋಜನೆಗಳಿಂದ ಕೂಡ ಸಂತ್ರಸ್ತರನ್ನು ವಂಚಿತರನ್ನಾಗಿ ಮಾಡಲಾಗಿದೆ.

ಜನಸಂಖ್ಯೆಯ ಆರನೇ ಒಂದರಷ್ಟಿರುವ ಜೌಜುವಾಂಗ್ ಗ್ರಾಮದ ಗ್ರಾಮಸ್ಥನೊಬ್ಬ ತನ್ನ ಪೋಷಕರಿಗೆ ಹೊಸ ಗುರುತು ಪುಸ್ತಕ ಪಡೆಯಲು ಅರ್ಜಿ ಸಲ್ಲಿಸಿದಾಗ, ಗ್ರಾಮದ 300 ಮಂದಿ ಬದುಕಿದ್ದರೂ ಸತ್ತುಹೋಗಿದ್ದಾರೆಂದು ದಾಖಲಿಸಿರುವುದು ಬೆಳಕಿಗೆ ಬಂತು. 1996 ಮತ್ತು 1998ರ ನಡುವೆ ಪಟ್ಟಿಗಳಿಂದ ಅವರ ಹೆಸರುಗಳನ್ನೇ ಅಳಿಸಿಹಾಕಿ ಅವರು ಜೀವಂತವಿದ್ದರೂ ಕೂಡ ಸತ್ತಿದ್ದಾರೆಂದೇ ದಾಖಲಿಸಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ