ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನಾಲ್ಕರ ಕೂಸಿನ ಮೇಲೆ 14ರ ಬಾಲಕನ ದೌರ್ಜನ್ಯ, ಹತ್ಯೆ (California | Fresno County | Murder | Alex)
Feedback Print Bookmark and Share
 
ಕೇಂದ್ರ ಕ್ಯಾಲಿಫೋರ್ನಿಯ 14ರ ಪ್ರಾಯದ ಬಾಲಕನೊಬ್ಬ ಕೇವಲ ನಾಲ್ಕರ ಪ್ರಾಯದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಹತ್ಯೆ ಮಾಡಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.

ಮಗುವಿನ ದೇಹವು ಬಟ್ಟೆ ಒಣಗಿಸುವ ಯಂತ್ರದಲ್ಲಿ ಪತ್ತೆಯಾದ ಬಳಿಕ ಪ್ರಾಸಿಕ್ಯೂಟರ್‌ಗಳು ಬಾಲಕನ ವಿರುದ್ಧ ಅಪಹರಣ, ಹತ್ಯೆ ಮತ್ತಿತರ ಆರೋಪಗಳನ್ನು ಹೊರಿಸಿದ್ದಾರೆ.

ಅಪ್ರಾಪ್ತ ವಯಸ್ಕ ಬಾಲಕನ ವಿರುದ್ಧ ಲೈಂಗಿಕ ದೌರ್ಜನ್ಯ, ಅಪಹರಣ ಮತ್ತು ಸಾಕ್ಷ್ಯವನ್ನು ಮುಚ್ಚಿಹಾಕಲು ಪ್ರತ್ಯಕ್ಷದರ್ಶಿಯೊಬ್ಬನ ಹತ್ಯೆ ಆರೋಪವನ್ನು ಕೂಡ ಹೊರಿಸಲಾಗಿದೆ. ಬಾಲಕ ತಪ್ಪಿತಸ್ಥನೆನ್ನುವುದು ಸಾಬೀತಾದರೆ ಅವನಿಗೆ ಜೀವಾವಧಿ ಶಿಕ್ಷೆ ಕಾದುಕೊಂಡಿದೆ.

ಮೆಂಡೊಟಾದ 14 ವರ್ಷ ಪ್ರಾಯದ ಬಾಲಕನ ಮನೆಯಲ್ಲಿ ನಾಲ್ಕು ವರ್ಷ ಪ್ರಾಯದ ಬಾಲಕ ಅಲೆಕ್ಸ್ ಕ್ರಿಸ್ಟೋಫರ್ ಮರ್ಕೆಡೊ ದೇಹ ಪತ್ತೆಯಾಗಿದೆಯೆಂದು ಫ್ರೆಸ್ನೊ ಕೌಂಟಿ ಶೆರಿಫ್ ಮಾರ್ಗರೇಟ್ ಮಿಮ್ಸ್ ತಿಳಿಸಿದ್ದಾರೆ. ಅಲೆಕ್ಸ್‌ನನ್ನು ಡ್ರೈಯರ್‌ನಲ್ಲಿ ಹಾಕುವ ಮುಂಚೆ ಅವನನ್ನು ನೀರಿನಲ್ಲಿ ಉಸಿರುಕಟ್ಟಿಸಿ ಕೊಲ್ಲಲಾಗಿದೆಯೆಂದು ಫ್ರೆಸ್ನೊ ಕೌಂಟಿ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ